ಬೆಂಗಳೂರು: ಸದ್ಯ ರಾಜ್ಯದಲ್ಲಿ ಹಿಜಾಬ್ ವಿಚಾರ ಸಿಕ್ಕಾಪಟ್ಟೆ ತಲೆದೂರಿದೆ. ಹೈಕೋರ್ಟ್ ಅಂಗಳದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ ಎಲ್ಲರ ಚಿತ್ತ ತೀರ್ಪಿನತ್ತ ನೆಟ್ಟಿದೆ. ಈ ಮಧ್ಯೆ ಕೋರ್ಟ್ ಆದೇಶವಿದ್ರು ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಿಯೇ ಬಡುತ್ತಿದ್ದಾರೆ.
ರಾಜ್ಯಾದ್ಯಂತ ಕಾಲೇಜುಗಳಲ್ಲಿ ಪ್ರತಿ ದಿನ ಹಿಜಾಬ್ ಹಾಕಿ ಬರುತ್ತಿರುವುದೇ ಸುದ್ದಿಯಾಗುತ್ತಿದೆ. ನಿಜವಾದ ಸಮಸ್ಯೆ ಶುರುವಾಗುವುದು ನಾಳೆಯಿಂದ. ಯಾಕಂದ್ರೆ ನಾಳೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಮಾರ್ಚ್ 25ರ ವರೆಗೆ ಪರೀಕ್ಷೆ ನಡೆಯಲಿದೆ.
30 ಅಂಕಗಳಿಗೆ ಈ ಪರೀಕ್ಷೆ ನಡೆಯಲಿದೆ. ಪಿಯುಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗುವವರಿಗೆ ಈ ಪರೀಕ್ಷೆ ತುಂಬಾ ಅಂದ್ರೆ ತುಂಬಾ ಮುಖ್ಯವಾದದ್ದಾಗಿದೆ. ಯಾಕಂದ್ರೆ ಪ್ರಾಯೋಗಿಕ ಪರೀಕ್ಷೆಯ ಅಂಕಗಳು ಗಣನೆಗೆ ಬರಲಿದೆ. ಸಿಇಟಿ ಪರೀಕ್ಷೆಯಲ್ಲಿ 45 ಅಂಕ ಗಳಿಸಿದ್ರೆ ಮಾತ್ರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ.
ಆದ್ರೆ ಸದ್ಯದ ಸ್ಥಿತಿ ನೋಡಿದ್ರೆ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಭವಿಷ್ಯ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಅತ್ತ ನಮಗೆ ಹಿಜಾಬೇ ಮುಖ್ಯ ಅಂತ ಸಾಕಷ್ಟು ವಿದ್ಯಾರ್ಥಿನಿಯರು ತರಗತಿಯನ್ನ ಬಹಿಷ್ಕರಿಸಿರುವ ಉದಾಹರಣೆ ಇದೆ. ಇತ್ತ ಕಾಲೇಜು ಆಡಳಿತ ಮಂಡಳಿ ಹಿಜಾಬ್ ತೆಗೆಯದೆ ವಿದ್ಯಾರ್ಥಿನಿಯರನ್ನ ಒಳಗೆ ಬಿಡುತ್ತಿಲ್ಲ. ಹಾಗಾದ್ರೆ ನಾಳೆಯ ಪರೀಕ್ಷೆ ಹೇಗೆ ನಡೆಯಲಿದೆ..? ಒಂದು ವೇಳೆ ಹಿಜಾಬ್ ತೆಗೆಯದೆ ಇದ್ದರೆ ಪರೀಕ್ಷೆ ಮತ್ತೆ ಬರೆಯಲು ಅವಕಾಶ ಸಿಗುತ್ತಾ ಈ ಎಲ್ಲಾ ಪ್ರಶ್ನೆಗಳು ವಿದ್ಯಾರ್ಥಿನಿಯರನ್ನು ಕಾಡುತ್ತಿದೆ. ಒಟ್ಟಾರೆ ನಾಳೆಯಿಂದ ಶಿಕ್ಷಕರಿಗೂ ತಲೆನೋವು ತಪ್ಪಿದ್ದಲ್ಲ.