ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ಕಿಚ್ಚು ಹೆಚ್ಚಿದೆ. ಈ ಮಧ್ಯೆ ಶಾಲೆಗೆ ಮೂರು ದಿನಗಳ ಕಾಲ ರಜೆಯನ್ನು ಘೋಷಣೆ ಮಾಡಲಾಗಿತ್ತು. ಈ ಸಂಬಂಧ ಶಿಕ್ಷಣ ಸಚಿವ ನಾಗೇಶ್ ಅವರು ಮಾತನಾಡಿದ್ದು, ಸಮವಸ್ತ್ರ ನಿಯಮ ಇರುವೆಡೆ ಪಾಲಿಸಲೇಬೇಕಲ್ಲವೇ ಎಂದಿದ್ದಾರೆ.
ಇನ್ನು ಶಾಲಾ ಕಾಲೇಜಿನ ರಜೆ ವಿಸ್ತರಣೆ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸಮವಸ್ತ್ರದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಶಾಲೆಗಳಲ್ಲಿ ಏನೂ ನಿಯಮವಿರುತ್ತೆ ಅದನ್ನ ಪಾಲನೇ ಮಾಡಲೇಬೇಕು. ಮಕ್ಕಳಿಗೆ ಎಲ್ಲಕ್ಕಿಂತ ಮೊದಲು ವಿದ್ಯಾಭ್ಯಾಸ ಮುಖ್ಯ.
ಇನ್ನು ಹಿಜಾಬ್ ವಿವಾದ ಪ್ರಕರಣ ಸದ್ಯ ಹೈಕೋರ್ಟ್ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಶಾಲಾ ಕಾಲೇಜಿಗೆ ರಜೆಯನ್ನು ಘೋಷಿಸಲಾಗಿದೆ. ಈ ಹಿನ್ನೆಲೆ ಸಿಎಂ ಬಳಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ.