ಬೆಂಗಳೂರು: ಸದ್ಯ ರಾಜ್ಯದಲ್ಲಿ ಹಿಜಾಬ್ ವಿಚಾರ ತಲೆದೂರಿದೆ. ಕೋರ್ಟ್ ಅಂಗಳದಲ್ಲಿರುವ ಹಿಜಾಬ್ ವಿಚಾರಕ್ಕೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿ, ಮುಂದಿನ ವರ್ಷ ಸಮವಸ್ತ್ರದ ಗೊಂದಲ ಇಲ್ಲದಂತೆ ಕಾನೂನು ಮಾಡುತ್ತೇವೆ ಎಂದಿದ್ದಾರೆ.

ಇನ್ನು ಹಿಜಾಬ್ ವಿಚಾರಕ್ಕೆ ಪ್ರಿಯಾಂಕ ಗಾಂಧಿ ಕೊಟ್ಟ ಬಿಕಿನಿ ಹೇಳಿಕೆಗೂ ಉತ್ತರಿಸಿರುವ ಬಿ ಸಿ ನಾಗೇಶ್, ಮಕ್ಕಳಿಗೆ ಸ್ವಾತಂತ್ರ್ಯ ಕೊಡಬೇಕು, ಹಾಗಂತ ಬಿಕಿನಿ ಹೇಳಿಕೆಯೂ ಸರಿಯಲ್ಲ ಎಂದಿದ್ದಾರೆ. ಇನ್ನು ಜಮೀರ್ ಅಹ್ಮದ್ ಬಗ್ಗೆ ಮಾತನಾಡಿ, ನಾಲಿಗೆಯಲ್ಲಿ ಮೂಳೆ ಇಲ್ಲ ಎಂಬ ಕಾರಣಕ್ಕೆ ಏನೇನೋ ಮಾತಾಡೋದು ಸರಿಯಲ್ಲ. ಕಾಂಗ್ರೆಸ್ ನಾಯಕರು ಮಾತಾಡುವ ಹೇಳಿಕೆಗಳೆ ಗೊಂದಲ ಮೂಡಿಸುತ್ತಿವೆ ಎಂದಿದ್ದಾರೆ.

ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಆದರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಬರಬೇಕು. ಸಮವಸ್ತ್ರ ಇಲ್ಲದೆ ಯಾರು ಶಾಲಾ ಕಾಲೇಜಿಗೆ ಬರುವ ಹಾಗಿಲ್ಲ. ಹೈಕೋರ್ಟ್ ಆದೇಶವನ್ನ ಎಲ್ಲರೂ ಪಾಲನೆ ಮಾಡಬೇಕು. ಶಾಲಾ ಕಾಲೇಜಿನಲ್ಲಿ ಹಿಜಬ್, ಕೇಸರಿ ಶಾಲು ಯಾವುದಕ್ಕೂ ಅವಕಾಧ ಇಲ್ಲ ಎಂದಿದ್ದಾರೆ.


