ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಲೆದೂರಿದೆ. ಸದ್ಯ ಹೈಕೋರ್ಟ್ ಅಂಗಳದಲ್ಲಿ ಹಿಜಾಬ್ ಕೇಸ್ ಇದ್ದು, ವಿಚಾರಣೆ ನಡೆಯುತ್ತಿದೆ. ನಾಳೆಯಿಂದ ಕಾಲೇಜುಗಳ ಪುನರಾರಂಭಕ್ಕೆ ಸರ್ಕಾರ ಸೂಚನೆ ನೀಡಿದೆ. ಆದರೆ ಕೋರ್ಟ್ ನಿಂದ ಇನ್ನು ತೀರ್ಪು ಹೊರ ಬಿದ್ದಿಲ್ಲ.

ಕೆಲವೊಂದು ಕಡೆ ಪರೀಕ್ಷೆಗಿಂತ ಹಿಜಾಬೇ ಮುಖ್ಯವೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದು, ಪರೀಕ್ಷೆಯನ್ನೇ ಬರೆದಿಲ್ಲ. ಇದರ ನಡುವೆ ಕಾಲೇಜುಗಳು ಆರಂಭವಾಗುತ್ತಿವೆ. ಹಿಜಾಬ್ ಧರಿಸಿದರೆ ಕಾಲೇಜಿನ ಆವರಣಕ್ಕೂ ಬಿಟ್ಟುಕೊಳ್ಳಲ್ಲ. ಯಾಕಂದ್ರೆ ಹೈಕೋರ್ಟ್ ಆದೇಶ ಕೂಡ ಇದೆ. ಈ ಮಧ್ಯೆ ಇಂದು ವಿಚಾರಣೆ ಮುಂದೂಡಿರುವ ಹೈಕೋರ್ಟ್, ಕಾಲೇಜು ಅಭಿವೃದ್ಧಿ ಸಮಿತಿಗೆ ಕಾಯ್ದೆಯಡಿ ಅಧಿಕಾರವಿಲ್ಲ. ಹೀಗಾಗಿ ಸಮವಸ್ತ್ರ ಜಾರಿ ಅಧಿಕಾರವನ್ನು ಅಭಿವೃದ್ಧಿ ಸಮಿತಿಗೆ ನೀಡಲು ಸಾಧ್ಯವಿಲ್ಲ ಎಂದಿದೆ. ನಾಳೆಗೆ ವಿಚಾರಣೆ ಮುಂದೂಡಿ, ವಾದ ಮಂಡಿಸಲು ಸೂಚಿಸಿದ್ದಾರೆ.


