ಉಡುಪಿ: ಹಿಜಾಬ್ ವಿವಾದ ಈಗ ಸುಪ್ರೀಂ ಕೋರ್ಟ್ ನಲ್ಲಿದ್ದು, ಅರ್ಜಿಗಳು ಇನ್ನು ಕೂಡ ದಾಖಲಾಗುತ್ತಿದೆ. ಮುಂದಿನ ಆದೇಶದವರೆಗೂ ಧಾರ್ಮಿಕ ಸಮವಸ್ತ್ರಕ್ಕೆ ಅವಕಾಶವಿಲ್ಲ ಎಂದಿದೆ. ಹೈಕೋರ್ಟ್ ಆದೇಶಕ್ಕೆ CFI ಅಸಮಾಧಾನ ಹೊರ ಹಾಕಿದೆ.
ಜಿಲ್ಲೆಯಲ್ಲಿ ಮಾತನಾಡಿದ, CFI ರಾಜ್ಯಾಧ್ಯಕ್ಷ ಅತಾವುಲ್ಲಾಖಾನ್, ಹಿಜಾಬ್ ಪರ ನಮ್ಮ ಹೋರಾಟ ಮುಂದುವರೆಯುತ್ತೆ. ಹೈಕೋರ್ಟ್ ಆದೇಶ ನಮಗೆ ತೃಪ್ತಿ ತಂದಿಲ್ಲ. ಇದನ್ನ ನಾವೂ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.
ನಮ್ಮ ಪರವಾಗಿ ಜಡ್ಜ್ ಮೆಂಟ್ ಬರುತ್ತೆ. ಬರದೆ ಇದ್ದರೆ ನಮ್ಮ ಹೋರಾಟ ಮುಂದುವರೆಸುತ್ತೇವೆ. ನಮ್ಮ ಹಿಜಾಬ್ ಮಾತ್ರ ಧಾರ್ಮಿಕ ನಂಬಿಕೆ ಇರೋದು. ಕೇಸರಿ ಶಾಲು ಅನ್ನೋದು ಧಾರ್ಮಿಕ ನಂಬಿಕೆ ಅಲ್ಲ. ಕೋರ್ಟ್ ದಾರಿ ತಪ್ಪಿಸಲು ಕೇಸರಿ ಶಾಲು ಹಾಕಿರೋದು. ಕಾನೂನಾತ್ಮಕ ನೆಲೆಗಟ್ಟಿನಲ್ಲಿ ನ್ಯಾಯ ಸಿಗ್ಬೇಕು. ವಿದ್ಯಾರ್ಥಿಗಳು ಅವರ ಹಕ್ಕಿಗಾಗಿ ಬಂದಿದ್ದಾರೆ, ನಾವೂ ಅವರ ಹಕ್ಕಿಗಾಗಿ ನಿಂತಿದ್ದೇವೆ ಎಂದಿದ್ದಾರೆ.