ನವದೆಹಲಿ: ರಾಜ್ಯದಲ್ಲಿ ವಿವಾದ ಸೃಷ್ಟಿ ಮಾಡಿ, ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಹಿಜಾಬ್ ಪ್ರಕರಣ ಇದೀಗ ಸಿಜೆಐ ಪೀಠಕ್ಕೆ ವರ್ಗಾವಣೆಯಾಗಿದೆ. ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಹಾಗೂ ಸುಧಾಂಶು ಧುಲಿಯಾ ವಿಭಜಿತ ತೀರ್ಪು ನೀಡಿರುವ ಕಾರಣ ಹಿಜಾಬ್ ಪ್ರಕರಣವನ್ನು ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಇಂದು ಸುಪ್ರೀಂ ಕೋರ್ಟ್ ನಲ್ಲಿ ದ್ವಿಸದಸ್ಯ ಪೀಠದ ಅರ್ಜಿ ವಿಚಾರಣೆ ನಡೆದಿತ್ತು. ದ್ವಿಸದಸ್ಯ ಪೀಠದಿಂದ ಯಾವಾಗಲೇ ತೀರ್ಪು ಬಂದರೂ ಇಬ್ಬರು ನ್ಯಾಯಮೂರ್ತಿಗಳು ಚರ್ಚಿಸಿ ತೀರ್ಮಾನ ನೀಡುತ್ತಾರೆ. ಆದರೆ ಹಿಜಾಬ್ ಪ್ರಕರಣದಲ್ಲಿ ಒಬ್ವರು ಪರವಾಗಿ ನೀಡಿದ್ದರೆ. ಇನ್ನೊಬ್ಬರು ವಿರೋಧವಾಗಿ ನೀಡಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಈ ಕೇಸನ್ನು ಸಿಜೆಐಗೆ ವರ್ಗಾವಣೆ ಮಾಡಿದೆ.