ಬೆಂಗಳೂರು: ಕಳೆದ 11 ದಿನದಿಂದ ಸತತವಾಗಿ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಬೆಳಗ್ಗೆಯೇ ತೀರ್ಪು ಸಿಗಲಿದೆ.
ವಾದ-ಪ್ರತಿವಾದ ಆಲಿಸಿರುವ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠ ನಾಳೆ ಅಂತಿಮ ತೀರ್ಪು ನೀಡಲಿದೆ.
ಶಾಲಾ – ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಿದೆ. ಕುಂದಾಪುರದ ಶಾಲೆಯೊಂದರಲ್ಲಿ ಆರಂಭವಾದ ಹಿಜಾಬ್ ವಿವಾದ ಇಡೀ ರಾಜ್ಯವನ್ನ ಆವರಿಸಿತ್ತು. ಕಳೆದ 11 ದಿನದಿಂದಲೂ ಹೈಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಶಾಲಾ ಕಾಲೇಜುಗಳಲ್ಲಿ ಪರೀಕ್ಷಾ ಸಮಯವಾಗಿದ್ದರು, ವಿದ್ಯಾರ್ಥಿನಿಯರು ಹಿಜಾಬ್ ಮುಖ್ಯ ಎಂದು ಪರೀಕ್ಷೆಯನ್ನೇ ತಿರಸ್ಕರಿಸುವ ಘಟನೆಗಳು ನಡೆದಿವೆ.