ಧಾರಾವಾಡ: ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಗ್ರಂಥಾಲಯದಲ್ಲಿ ವೀರ ಸಾವರ್ಕರ್ ಪುಸ್ತಕ ಇಡುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳು ಅಲ್ಲಿನ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ನ್ಯಾ. ಬಿ ವೀರಪ್ಪ ಭೇಟಿ ನೀಡಿದ್ದರು. ಈ ವೇಳೆ ಗ್ರಾಂಥಾಲಯದ ಕಡೆಗೂ ಬಂದಾಗ, ಇದರಲ್ಲಿ ಸಾವರ್ಕರ್ ಪುಸ್ತಕವಿದೆಯಾ ಎಂದು ಕೇಳಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ ಇಲ್ಲ ಎಂದಾಗ, ಆ ಗ್ರಂಥಾಲಯದಲ್ಲಿ ವೀರ ಸಾವರ್ಕರ್ ಪುಸ್ತಕ ಇಡುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಮಹಾಭಾರತ, ರಾಮಾಯಣ, ಬೈಬಲ್, ಕುರಾನ್ ಪುಸ್ತಕಗಳನ್ನು ಇಡಲು ಸೂಚಿಸಿದ್ದಾರೆ.
ಅಷ್ಟೇ ಅಲ್ಲ ಮಹಿಳಾ ಕಾರಾಗೃಹದಲ್ಲಿ ಮಹಿಳಾ ಕೈದಿಯೊಬ್ಬರ ಜೊತೆ ಮಗು ಕೂಡ ಇತ್ತು. ಆ ಮಗುವಿನ ಬಗ್ಗೆ ವಿಚಾರಿಸಿ, ಆ ಮಗುವನ್ನು ಇಲ್ಲಿ ಇಟ್ಟುಕೊಳ್ಳಬೇಡಿ, ಶಾಲೆಗೆ ಕಳುಹಿಸಿ ಎಂದು ಜೈಲು ಸಿಬ್ಬಂದಿಗೆ ಸೂಚನೆ ನೀಡಿದರು. ಬಳಿಕ ಮಗುವಿನ ಹತ್ತಿರ ಅಮ್ಮ ಇಲ್ಲೆ ಇರುತ್ತಾರೆ, ನೀನು ಶಾಲೆಗೆ ಹೋಗಿ ಚೆನ್ನಾಗಿ ಓದಬೇಕು ಎಂದು ಕಿವಿ ಮಾತು ಹೇಳಿದರು.