ಬೆಂಗಳೂರು: ಒಂದು ಕಡೆ ಚುನಾವಣೆ.. ಮತ್ತೊಂದು ಕಡೆ ಸಿಬಿಐ ಕಾಟ.. ಇದಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರದಾಟ. ಸದ್ಯ ಚುನಾವಣೆಯ ಪ್ರಚಾರದಲ್ಲಿರುವ ಡಿಕೆ ಶಿವಕುಮಾರ್ ಗೆ ಇದೆ ತಿಂಗಳು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಆದೇಶ ನೀಡಿದೆ. ಈ ಸಂಬಂಧ ಈಗಾಗಲೇ ಡಿಕೆ ಶಿವಕುಮಾರ್ ಕೂಡ ಬೇಸರ ಹೊರ ಹಾಕಿದ್ದಾರೆ.
ಇನ್ನೊಂದು ಕಡೆ ಅಕ್ರಮ ಆಸ್ತಿ ಸಂಪಾದನೆ ಕೇಸ್ ಬೇರೆ. ಆಧರೆ ಈ ಎಲ್ಲಾ ಟೆನ್ಶನ್ ನಡುವೆ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ನಿಂದ ಅಕ್ರಮ ಆಸ್ತಿ ಸಂಪಾದನೆ ಕೇಸ್ ಗೆ ತನಿಖೆಗೆ ಮಧ್ಯಂತರ ತಡೆ ನೀಡಿದೆ.
ಚುನಾವಣಾ ಸಂದರ್ಭದಲ್ಲಿ ಸಿಬಿಐ ಸುಖಾ ಸುಮ್ಮನೆ ಡಿಕೆಶಿ ಕುಟುಂಬಕ್ಕೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ ಎಂದು ಡಿಕೆಶಿ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಆರೋಪಿ. ಆದರೆ ಅವರ ಮಗಳನ್ನು ವಿಚಾರಣೆಗೆ ಕರೆದಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ತೊಂದರೆಯಾಗುತ್ತಿದೆ. ಮಾನಸಿಕವಾಗಿ ಅವರಿಗೆ ಹಿಂಸೆ ನೀಡುತ್ತಿದ್ದಾರೆ ಎಂದಿದ್ದಾರೆ.
ಇದರ ಭಾಗವಾಗಿ ನ್ಯಾಯಮೂರ್ತಿಗಳು ಪ್ರಶ್ನೆ ಕೇಳಿದ್ದು, ಅವರ ಮಗಳು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಅಲ್ವಾ..? ವಿಚಾರಣೆ ಹಾಜರಾಗಬೇಕು. ಅಡ್ಡಿ ಪಡಿಸಬಾರದು ಅಲ್ವಾ ಎಂದಿದ್ದಾರೆ. ಇದೇ ವೇಳೆ ಸಿಬಿಐ ಪರ ವಕೀಲರು ವಾದ ಮಂಡಿಸಿದ್ದು, ಡಿಕೆ ಶಿವಕುಮಾರ್ ಮಗಳ ಹೆಸರಲ್ಲಿ 150 ಕೋಟಿ ಆಸ್ತಿ ಇದೆ. ಅದರ ಮೌಲ್ಯ ಎಷ್ಟು ಅಂತ ತಿಳಿದುಕೊಳ್ಳಬೇಕು. ತನಿಖೆ ಆರು ತಿಂಗಳಲ್ಲಿ ನಡೆಯಲಿದೆ ಎಂದಿದ್ದಾರೆ.