ಬೆಂಗಳೂರು; ಕನ್ನಡಿಗರ ಬಗ್ಗೆ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸೋನು ನಿಗಮ್ ಗೆ ಇದೀಗ ಕೊಂಚ ರಿಲೀಫ್ ಸಿಕ್ಕಂತೆ ಆಗಿದೆ. ಹೈಕೋರ್ಟ್ ರಿಲೀಫ್ ನೀಡಿದೆ. ಪೆಹಲ್ಗಾಮ್ ದಾಳಿಗೆ ಕನ್ನಡಿಗರನ್ನು ಹೋಲಿಕೆ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಕನ್ನಡಿಗರು ಸೋನು ನಿಗಮ್ ಹಾಡುಗಳು ಇನ್ಮುಂದೆ ನಮ್ಮ ಕರ್ನಾಟಕದಲ್ಲಿ ಕೇಳುವಂತಿಲ್ಲ ಎಂದು ಆಗ್ರಹ ಮಾಡಿದರು. ಕನ್ನಡ ಒರ ಹೋರಾಟಗಾರರ ಹೋರಾಡಕ್ಕೆ ಕನ್ನಡ ಚಿತ್ರರಂಗ ಕೂಡ ಸಮ್ಮತಿ ನೀಡಿತ್ತು. ಈ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಹೈಕೋರ್ಟ್ ರಿಲೀಫ್ ನೀಡಿದೆ.
ಈ ಸಂಬಂಧ ಸೋನು ನಿಗಮ್ ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದು ಕೋರಿ ಸೋನು ನಿಗಮ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸೋನು ನಿಗಮ್ ಪರವಾಗಿ ವಕೀಲ ಧನಂಜಯ್ ವಿದ್ಯಾಪತಿ ಅವರು ವಾದ ಮಂಡಿಸಿದರು. ಸರ್ಕಾರದ ಪರ ವಕೀಲ ಬಿ.ಎನ್.ಜಗದೀಶ್ ಆಕ್ಷೇಪವನ್ನು ವ್ಯಕ್ಯಪಡಿಸಿದರು. ಸೋನು ನಿಗಮ್ ಅವರು ಕನ್ನಡಕ್ಕೆ ಅವಮಾನ ಮಾಡುವ ಕೃತ್ಯ ಎಸಗಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಯಾರೋ ಮೂರನೇ ವ್ಯಕ್ತಿ ಕೊಟ್ಟ ದೂರನ್ನು ಆಧರಿಸಿ ಕೇಸ್ ದಾಖಲಿಸಲಾಗಿದೆ. ಸೋನು ನಿಗಮ್ ಅವರು ಈಗಾಗಲೇ ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ ಎಂದು ವಾದಿಸಿದ್ದರು.
ವಾದ, ಪ್ರತಿವಾದವನ್ನು ಆಲಿಸಿದ ಹೈಕೋರ್ಟ್, ಸೋನು ನಿಗಮ್ ಅವರಿಗೆ ಬಿಗ್ ರಿಲೀಫ್ ನೀಡಿದೆ. ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಲಾಗಿದೆ. ಅಲ್ಲದೆ ವಿಚಾರಣೆಗೆ ಸಹಕರಿಸುವಂತೆಯೂ ಸೋನು ನಿಗಮ್ ಸೂಚನೆ ನೀಡಿದೆ.
















