ಮುಂಬೈ: ಸಿಎಂ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸಲು ಹೋಗಿದ್ದ ಸಂಸದೆ ನವನೀತಾ ರಾಣಾ ಹಾಗೂ ಶಾಸಕ ರವಿ ರಾಣಾ ಮೇಲೆ ಈಗಾಗಲೇ ಕೇಸ್ ದಾಖಲಾಗಿದೆ. ಅದರಲ್ಲಿ ದೇಶದ್ರೋಹದ ಕೇಸ್ ಕೂಡ ದಾಖಲಾಗಿದೆ. ದಂಪತಿ ಈ ಸಂಬಂಧ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ದೇಶದ್ರೋಹದ ಕೇಸ್ ರದ್ದುಗೊಳಿಸಲು ಅರ್ಜಿ ಹಾಕಿದ್ದರು.
ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿ, ಕೇಸ್ ರದ್ದುಗೊಳಿಸಲು ತಿರಸ್ಕಾರ ಮಾಡಿದೆ. ಅಷ್ಟೇ ಅಲ್ಲ ಬಾಂಬೆ ಕೋರ್ಟ್ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದೆ. ಎಷ್ಟೇ ದೊಡ್ಡ ಪವರ್ ಇದ್ದರೂ ಕೂಡ ಅಷ್ಟೇ ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಸಾರ್ವಜನಿಕವಾಗಿ ಜನಪ್ರತಿನಿಧಿಗಳ ಜವಬ್ದಾರಿ ದೊಡ್ಡದಿರುತ್ತದೆ ಎಂದು ಕೋರ್ಟ್ ಜವಬ್ದಾರಿ ಪಾಠ ಮಾಡಿದೆ.
ಇನ್ನು ಹನುಮಾನ್ ಚಾಲೀಸಾ ಪಠಿಸುವ ವಿವಾದ ರಾಜಕೀಯ ಬಣ್ಣ ಬಳಿದುಕೊಂಡಿದೆ. ದಿನೇ ದಿನೇ ಬೇರೆ ಬೇರೆ ಕಡೆಗೆ ತಿರುಗುತ್ತಿದೆ. ಇದೀಗ ಸಂಸದೆ ನವನೀತಾ ರಾಣಾ ಸ್ಪೀಕರ್ ಓಮ್ ಬಿರ್ಲಾಗೆ ಲಿಖಿತ ದೂರು ನೀಡಿದ್ದಾರೆ. ಠಾಣೆಯಲ್ಲಿ ನನ್ನನ್ನು ಕೂಡಿ ಹಾಕಿದ್ದಾರೆ. ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸ್ಪೀಕರ್, 24 ಗಂಟೆಯ ಒಳಗೆ ವರದಿ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.