ಹಾವೇರಿ: ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಹೈಕೋರ್ಟ್ ಮುಂದಿನ ತೀರ್ಮಾನದವರೆಗೂ ಯಥಾ ಸ್ಥಿತಿ ಕಾಪಾಡಿಕೊಳ್ಳುವುದಕ್ಕೆ ಸೂಚನೆ ನೀಡಿತ್ತು. ಹೀಗಾಗಿ ಮೀಸಲಾತಿ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಾವ ತೀರ್ಮಾನವನ್ನು ಮಾಡುವುದಕ್ಕೆ ಆಗುವುದಿಲ್ಲ. ಈ ಸಂಬಂಧ ಇದೀಗ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ಹೊರ ಹಾಕಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಮಾಡಿ ಮಾತು ಕೊಟ್ಟಿದ್ದರು. ಆದರೆ ಈಗ ಅವರು ಮಾತು ತಪ್ಪಿದ್ದಾರೆ. ಆದರೆ 2C, 2D ಹೊಸ ಪ್ರವರ್ಗ ರಚನೆ ಮಾಡಿದ್ದಾರೆ. ನಮಗೆ 2ಎ ಮೀಸಲಾತಿ ನೀಡಬೇಕು. 2ಡಿ ಮೀಸಲಾತಿಯಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಅಸಂವಿಧಾನಿಕವಾಗಿ ನಿರ್ಣಯ ತೆಗೆದುಕೊಂಡಿದ್ದರು. ಎಷ್ಟು ಮೀಸಲಾತಿ ಕೊಡುತ್ತೀವಿ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ನಾವೂ ಕೇಳಿದ್ದು 2ಎ ಮೀಸಲಾತಿ, ಆದರೆ ಅವರು ನೀಡಿದ್ದು, 2ಡಿ ಮೀಸಲಾತಿ. ತಾಯಿಯ ಮೇಲೆ ಪ್ರಮಾಣ ಮಾಡಿ ಮಾತು ತಪ್ಪಿದ್ದಾರೆ. ಒಂದು ದಿನ ಸಾಂಕೇತಿಕವಾಗಿ ಸತ್ಯಾಗ್ರಹ ಮಾಡಿದ್ದೇವೆ. ನಮ್ಮ ನೋವು ಏನು ಎಂಬುದನ್ನು ಇಂದು ನಾವೂ ತೋರಿಸಲಿದ್ದೇವೆ ಎಂದಿದ್ದಾರೆ.