ಬೆಂಗಳೂರು; ಭಾರತ ವರ್ಸಸ್ ಪಾಕಿಸ್ತಾನದ ನಡುವೆ ಘರ್ಷಣೆ ಜೋರಾಗಿದೆ. ಸದ್ಯದ ಪರಿಸ್ಥಿಯನ್ನ ನೋಡಿದ್ರೆ ಘರ್ಷಣೆ ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರವೂ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದೆ. ಅಷ್ಟೇ ಅಲ್ಲ ನಾಗರೀಕರಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ. ಇದೀಗ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡ ರಾಜ್ಯದಲ್ಲಿ ಸುರಕ್ಷತೆಗಾಗಿ ತೆಗೆದುಕೊಳ್ಳುವ ಕ್ರಮದ ಬಗ್ಗೆ ವಿವರಿಸಿದ್ದಾರೆ. ಜೊತೆಗೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹೆಚ್ವಿನ ರಜೆಗಳನ್ನ ರದ್ದು ಮಾಡಿದ್ದಾರೆ.
ಸೂಕ್ಷ್ಮ ಪರಿಸ್ಥಿತಿ ಇರೋದ್ರಿಂದ ಪೊಲೀಸರಿಗೆ ರಜೆ ಘೋಷಣೆ ಮಾಡಲ್ಲ. ಹೆಚ್ಚುವರಿ ರಜೆಗಳನ್ನ ಯಾರಿಗೂ ಕೊಡುತ್ತಿಲ್ಲ. ಗಡಿಯಲ್ಲಿ ಈಗಾಗಲೇ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ಷ್ಮ ಸನ್ನಿವೇಶ ಯಾವಾಗ ನಾರ್ಮಲ್ ಆಗುತ್ತೋ ಗೊತ್ತಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಎಚ್ಚತಿಕೆಯ ಸಂದೇಶವನ್ನು ರವಾನೆ ಮಾಡಿದೆ. ಹೀಗಾಗಿ ಗಡಿ ಪ್ರದೇಶ ಹಾಗೂ ಕರಾವಳಿ ಪ್ರದೇಶಗಳಲ್ಲಿ ಸೆಕ್ಯೂರಿಟಿ ಹೆಚ್ಚಿಸಲಾಗಿದೆ. ಯುದ್ಧ ಸನ್ನಿವೇಶದಲ್ಲಿ ಟೈಟ್ ಇರುತ್ತದೆ. ಮಂಗಳೂರು, ಉತ್ತರ ಕನ್ನಡದಲ್ಲಿ ಹೆಚ್ಚು ಸೆಕ್ಯೂರಿಟಿಯನ್ನು ಹೆಚ್ಚಿಸಲಾಗಿದೆ. ಯುದ್ಧದ ಸನ್ನಿವೇಶದಲ್ಲಿ ಟೈಟ್ ಇರುತ್ತದೆ. ನೌಕಾಪಡೆಯ ಸೇನೆಯ ಜೊತೆಗೆ ಪೊಲೀಸರು ಕೂಡ ಭದ್ರತೆಯನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಪೊಲೀಸರಿಗೆ ರಜೆ ಘೋಷಣೆ ಮಾಡಲ್ಲ. ಹಾಗೇ ಹೆಚ್ಚುವರಿ ರಜೆಗಳನ್ನ ಯಾರಿಗೂ ಕೊಡುತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಪಾಕಿಸ್ತಾನದ ಪಾಪಿ ಉಗ್ರರು ಕಾಶ್ಮೀರದಂತ ಸುಂದರ ಸ್ಥಳದಲ್ಲಿ ಸೌಂದರ್ಯ ಸವಿಯುತ್ತಿದ್ದಂತ ಸಮಯದಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲಲಾಗಿತ್ತು. ಮೋದಿಗೆ ಹೋಗಿ ಹೇಳಿ ಅಂತಾನೂ ಹೇಳಿದ್ದರು. ಈ ಮಾತನ್ನು ಕೇಳಿಸಿಕೊಂಡ ನಮ್ಮ ಪ್ರಧಾನಿ ಮೋದಿ ಸುಮ್ಮನೆ ಇರುವುದುಂಟೆ, ಉಗ್ರರ ಮೇಲೆ ಯುದ್ಧವನ್ನ ಘೋಷಣೆ ಮಾಡಿಯೇ ಬಿಟ್ಟಿದ್ದಾರೆ. ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ. ಹೀಗಾಗಿಯೇ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.






