ಬೆಂಗಳೂರು: ಬಿರು ಬಿಸಿಲಿನಲ್ಲೂ ಮಳೆರಾಯ ಭೂಮಿಯನ್ನು ತಂಪು ಮಾಡುತ್ತಿದ್ದಾನೆ. ದಿನೇ ದಿನೇ ಹೆಚ್ಚಾಗುತ್ತಿರುವ ತಾಪಮಾನಕ್ಕೆ ಜನ ಕಂಗಲಾಗಿದ್ದಾರೆ. ಬಿಸಿಲಿಗೆ ಬೆಂದು ಹೋಗುತ್ತಿದ್ದಾರೆ. ಅದನ್ನು ತಣಿಸಲು ಆಗಾಗ ಮಳೆರಾಯನ ಆಗಮನವಾಗಿದೆ. ಸದ್ಯಕ್ಕೆ ಈಗಾಗಲೇ ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದ್ದು, ಇನ್ನು ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಅಲ್ಲಲ್ಲಿ ಮಳೆಯಾಗಿದೆ. ಇನ್ನು ಮುಂದಿನ ಮೂರು ದಿನ ಕಲಬುರಗಿ, ಯಾದಗಿರಿ, ರಾಯಚೂರಿನಲ್ಲಿ ಸಾಧಾರಣ ಮಳೆಯಾಗಲಿದೆ. ವಿಜಯಪುರದಲ್ಲಿ ಒಣಹವೆ ಇರಲಿದೆ. ಕರಾವಳಿ ಭಾಗದಲ್ಲಿ ಗುಡುಗು ಸಹಿತ ಬಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ.
ಹೀಗಾಗಿ ಕರಾವಳಿ ಭಾಗದ ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ ಹವಮಾನ ಇಲಾಖೆ. ಸದ್ಯ ಬಿಸಿಲಿಗೆ ಬೆಂದಿರುವ ಭೂಮಿಗೆ ಮಳೆರಾಯ ತಂಪೆರದರೆ ಸಾಕು ಎನ್ನುವಂತೆ ಆಗಿದೆ.