ಯಾವುದೇ ಕೋಚಿಂಗ್ ಪಡೆಯದೆ ಐಎಎಸ್ ಪರೀಕ್ಷೆ ಪಾಸ್ ಮಾಡಿದ ದಾವಣಗೆರೆಯ ಸೌಭಾಗ್ಯ ಬಗ್ಗೆ ಇಲ್ಲಿದೆ ಮಾಹಿತಿ

1 Min Read

ಧಾರವಾಡ: ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು, ಧಾರವಾಡದ ವಿದ್ಯಾರ್ಥಿನಿಯೊಬ್ಬರು ರಾಜ್ಯಕ್ಕೆ 101ನೇ ರ್ಯಾಂಕ್ ಪಡೆದಿದ್ದಾರೆ. ಧಾರವಾಡದ ವಿವಿಯಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಅಗ್ರಿ ಪದವಿ ಮಾಡುತ್ತಿದ್ದಾರೆ. ಆದರೆ ಮೊದಲಿನಿಂದಾನೂ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದವರು.‌ ಇಂದು ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಸೌಭಾಗ್ಯ ಎಸ್ ಬೀಳಗಿಮಠ ಮೂಲತಃ ದಾವಣಗೆರೆಯವರು. ಐಎಎಸ್ ಮಾಡುವ ಕನಸು ಹೊತ್ತುಕೊಂಡು ಧಾರಾವಾಡಕ್ಕೆ ಬಂದರು. 2018ಕ್ಕೆ ಧಾರವಾಡದ ವಿಶ್ವ ವಿದ್ಯಾಲಯಕ್ಕೆ ಬಂದರು. ತಮಗೆ ಶಿಕ್ಷಣ ನೀಡುವ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಎಂ. ಅವರ ನಿವಾಸದಲ್ಲೇ ಉಳಿದು ವಿದ್ಯಾಭ್ಯಾಸ ಮಾಡಿದ ಸೌಭಾಗ್ಯ, ಅಶ್ವಿನಿ ಅವರ ಕೊಟ್ಟ ತರಬೇತಿಯನ್ನು ಪಡೆದು ಇದೀಗ ಮೊದಲ ಪ್ರಯತ್ನದಲ್ಲೇ ದೇಶದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಇನ್ನು ಸೌಭಾಗ್ಯ ಅವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಅವರಿಗೆ ತರಬೇತಿ ನೀಡಿದ ಪ್ರಾಧ್ಯಾಪಕಿ ಡಾ.ಅಶ್ವಿನಿ, ತಮ್ಮ ವಿದ್ಯಾರ್ಥಿನಿ ಮಾಡಿದ ಸಾಧನೆಗೆ ಖುಷಿ ವ್ಯಕ್ತಪಡಿಸಿದ್ದಾರೆ.

 

ಸೌಭಾಗ್ಯ ಯಾವುದೇ ತರಬೇತಿ ಪಡೆಯಲಿಲ್ಲ, ನಾನೇ ಆಕೆಗೆ ಗೊತ್ತಿದ್ದಷ್ಟು ತರಬೇತಿ ನೀಡಿದೆ. ನನ್ನ ವಿದ್ಯಾರ್ಥಿನಿ ಇಂತಹ ಸಾಧನೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಡಾ. ಅಶ್ವಿನಿ ಅವರು ಹೇಳಿದ್ದಾರೆ. ಕಷ್ಟಪಟ್ಟು ಓದುವ ವಿದ್ಯಾರ್ಥಿನಿ ಮನಸ್ಸುಗಳಿಗೆ ಈ ರೀತಿಯ ಶಿಕ್ಷಕರು ಸಿಕ್ಕಿದರೆ ಖಂಡಿತ ಸಾಧನೆಯ ಶಿಖರಕ್ಕೆ ಏರಬಹುದು.

Share This Article
Leave a Comment

Leave a Reply

Your email address will not be published. Required fields are marked *