ಈ ಬಾರಿಯ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆ ದಿನಾಂಕವಾಗಿದ್ದರಿಂದ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅದರಲ್ಲಿ ತಿರಸ್ಕಾರಗೊಂಡ ನಾಮಪತ್ರಗಳೆಷ್ಟು, ಅಂಗೀಕಾರವಾದ ನಾಮಪತ್ರಗೆಷ್ಟು ಎಂಬ ಡಿಟೈಲ್ ಇಲ್ಲಿದೆ.
3632 ಅಭ್ಯರ್ಥಿಗಳಿಂದ ಒಟ್ಟು 5102 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಅಂತಿಮ ಪರಿಶೀಲನೆ ವೇಳೆ 3130 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. 502 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕಾರಗೊಂಡಿವೆ. 3130 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ 2890 ಪುರುಷ ಅಭ್ಯರ್ಥಿಗಳು, 239 ಮಹಿಳಾ ಅಭ್ಯರ್ಥಿಗಳು ಮತ್ತು ಒಂದು ಇತರೆ ಅಭ್ಯರ್ಥಿಯ ನಾಮಪತ್ರವಾಗಿದೆ.
ಪಕ್ಷದವಾರು ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 211, ಎಎಪಿ 212, ಬಿಎಸ್‌ಪಿ 137, ಸಿಪಿಐಎಂ 4, ಎನ್‌ಪಿಪಿಯ 4 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ. ನೋಂದಣಿಯಾಗಿರುವ ಮಾನ್ಯತೆ ಪಡೆಯದ ಪಕ್ಷಗಳ 736 ಅಭ್ಯರ್ಥಿಗಳು ಮತ್ತು 1379 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.