ಬೆಳಗಾವಿ: ಅಧಿವೇಶನಗಳು ನಡೆಯುವಾಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ನಾಯಕರು ಸದ್ದು ಗದ್ದಲ ಮಾಡುವುದು ಸಹಜ. ಇದೀಗ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಇಂದಿಗೆ ಮೂರು ದಿನವಾಗಿದೆ. ಇಂದು ಕೂಡ ಕೆಲವೊಂದು ವಿಚಾರಗಳಿಗೆ ಸದ್ದು ಗದ್ದಲ ಉಂಟಾಗಿದೆ. ಇಂದು ಏನೆಲ್ಲಾ ಚರ್ಚೆಗಳಾಯ್ತು ಎಂಬ ಹೈಲೇಟ್ಸ್ ಪಾಯಿಂಟ್ಸ್ ಗಳು ಇಲ್ಲಿವೆ.
* ನಾಯಕತ್ವ ಬದಲಾವಣೆಯ ವಿಚಾರದ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು.
* ಉತ್ತರ ಕರ್ನಾಟಕ ಸಮಸ್ಯೆಯ ಬಗ್ಗೆ ಆರ್.ಅಶೋಕ್ ಹಾಗೂ ವಿಜಯೇಂದ್ರ ಸೇರಿದಂತೆ ಹಲವರು ಧ್ವನಿ ಎತ್ತಿದರು.
* ಲಿಂಗಾಯತರ ಮೇಲೆ ದೌರ್ಜನ್ಯ ನಡೆದು ಇಂದಿಗೆ ಒಂದು ವರ್ಷ. ಇಂದು ಕರಾಳ ದಿನ. ಈ ಸಂಬಂಧ ವಿಚಾರಣಾ ಆಯೋಗವನ್ನು ರಚನೆ ಮಾಡಲಾಗಿತ್ತು. ಆಯೋಗ ಈ ಸಂಬಂಧ ವರದಿ ಕೊಟ್ಟಿದೆ. ಆದರೆ ಯಾರ ಮೇಲೂ ಕ್ರಮ ಆಗಿಲ್ಲ ಎಂದು ಬಿಜೆಪಿ ಶಾಸಕಾಂಗ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡಿದರು.
* ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ವಿಧೇಯಕವನ್ನು ಮಂಡನೆಯನ್ನು ಮಾಡಿದರು. ಆದರೆ ಈ ವಿಧೇಯಕಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
* ಇದೇ ಸದನದ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಹೀಗೆ ಹಲವು ವಿಚಾರಗಳ ಚರ್ಚೆ, ಸಮಸ್ಯೆಗಳ ಚರ್ಚೆ ಜೊತೆಗೆ ಒಂದಷ್ಟು ಸ್ವಾರಸ್ಯಕರ ವಿಚಾರಗಳು ಸದನದಲ್ಲಿ ನಡೆದಿವೆ.


