ಜೂ.11ರಿಂದ ರಾಜ್ಯದಲ್ಲಿ ಜೋರು ಮಳೆ..!

1 Min Read

ಬೆಂಗಳೂರು; ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ತಗ್ಗಿದೆ. ಇದೀಗ ಹವಮಾನ ಇಲಾಖೆ ಮತ್ತೆ ಮಳೆಯಗುವ ಮುನ್ಸೂಚನೆಯನ್ನ ನೀಡಿದೆ. ಅದರಲ್ಲೂ ಜೂನ್ 11ರಿಂದ ರಾಜ್ಯದಲ್ಲಿ ಭಾರೀ ಮಳೆಯಾಗು ಸೂಚನೆಯನ್ನು ನೀಡಿದೆ. ಜೂನ್ 11ರಿಂದ ಮುಂಗಾರು ಚುರುಕಾಗುವ ಸೂಚನೆ ಇದ್ದು, ಈ ಹಿನ್ನೆಲೆಯಲ್ಲಿ ಮಳೆಯಾಗುವ ಸೂಚನೆಯನ್ನು ನೀಡಿದೆ.

ಬಳ್ಳಾರಿ, ವಿಜಯನಗರ, ದಾವಣಗೆರೆ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್ 12ಕ್ಕೆ ಬಳ್ಳಾರಿ, ವಿಜಯಪುರ, ವಿಜಯನಗರ, ದಾವಣಗೆರೆ, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಹಾಗೂ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ‌ ಮಾಡಲಾಗಿದೆ. ಇನ್ನು ನಾಲ್ಕು ದಿನದಲ್ಲಿ ಮಳೆಯ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.

ಪ್ರತಿ ವರ್ಷ ಮುಂಗಾರು ಮಳೆ‌ ಶುರುವಾಗುವಂತೆ ಈ ಬಾರಿ ಶುರುವಾಗಿಲ್ಲ. ಬದಲಿಗೆ ಬಹಳ ಬೇಗನೇ‌ ಮುಂಗಾರು ಮಳೆ ಶುರುವಾಗಿದೆ. ಹೀಗಾಗಿ ರೈತರು ಫುಲ್ ಖುಷಿಯಾಗಿದ್ದಾರೆ. ಈಗಾಗಲೇ ಜಮೀನುಗಳಿಗೆ ನೇಗಿಲ‌ನ್ನ ಸೋಕಿಸಿದ್ದಾರೆ. ಅಂದ್ರೆ ಗೇಯುವ ಕೆಲಸವನ್ನ ಶುರು ಮಾಡಿದ್ದಾರೆ. ಭೂಮಿ ಹದವಾಗಿದ್ದು, ಈಗ ಗೇಯ್ದು ಬಿಟ್ಟರೆ, ಇನ್ನೆರಡು ಮಳೆಯಾದರೆ ಬೀಜದ ಬಿತ್ತನೆಯನ್ನು ಮಾಡಬಹುದು ಎಂಬ ನಿರೀಕ್ಷೆಯನ್ನ ಇಟ್ಟುಕೊಳ್ಳಲಾಗಿದೆ. ಅದರಲ್ಲೂ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದೇ ಹೇಳಲಾಗುತ್ತಿದೆ. ಮುಂಗಾರು ಹಾಗೂ ಹಿಂಗಾರು ಎರಡು ಮಳೆಯು ಉತ್ತಮವಾಗಲಿದ್ದು, ಫಸಲು ಕೂಡ ಅದ್ಭುತವಾಗಿ ಕೈಗೆ ಸಿಗಲಿದೆ ಎನ್ನಲಾಗಿದೆ. ಹೀಗಾಗಿ ರೈತರು ಖುಷಿಯಾಗಿದ್ದು, ಕೃಷಿಯ ಕೆಲಸದತ್ತ ಮುಖ ಮಾಡಿದ್ದಾರೆ. ಕಳೆದ ವರ್ಷ ಬಿದ್ದಂತ ಮಳೆಗೆ ಜಲಾಶಯಗಳೆಲ್ಲ ತುಂಬಿವೆ. ಇದರಿಂದ ಜನ ಜಾನುವಾರುಗಳಿಗೆ ಬೇಸಿಗೆಯಲ್ಲೂ ನೆಮ್ಮದಿಯೆನಿಸಿದೆ. ಈ ಬಾರಿಯೂ ಉತ್ತಮ ಮಳೆಯಾದರೆ ಜಲಾಶಯಕ್ಕರ ಇನ್ನಷ್ಟು ನೀರು ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks