ಚಿತ್ರದುರ್ಗ,( ಸೆಪ್ಟಂಬರ್ 05) : ಜಿಲ್ಲೆಯಲ್ಲಿ ಸೆಪ್ಟಂಬರ್ 04ರಂದು ಸುರಿದ ಮಳೆ ವಿವರದನ್ವಯ ಚಳ್ಳಕೆರೆ ನಗರದಲ್ಲಿ 51 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಉಳಿದಂತೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ 26.4 ಮಿ.ಮೀ, ನಾಯಕನಹಟ್ಟಿ 29.4 ಮಿ.ಮೀ, ಡಿ.ಮರಿಕುಂಟೆ 41.2 ಮಿ.ಮೀ, ತಳುಕು 44 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 17.2 ಮಿ.ಮೀ, ರಾಮಗಿರಿ 4.4 ಮಿ.ಮೀ, ಚಿಕ್ಕಜಾಜೂರು 22.5 ಮಿ.ಮೀ, ಬಿ.ದುರ್ಗ 29.4 ಮಿ,ಮೀ, ಹೆಚ್.ಡಿ.ಪುರ 11.2 ಮಿ.ಮೀ, ತಾಳ್ಯ 14.4 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 19.6 ಮಿ.ಮೀ, ಬಾಗೂರು 5.3 ಮಿ.ಮೀ, ಮತ್ತೋಡು 25.4 ಮಿ.ಮೀ, ಮಾಡದಕೆರೆ 16 ಮಿ.ಮೀ, ಶ್ರೀರಾಂಪುರ 32 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 43.6 ಮಿ.ಮೀ, ಬಬ್ಬೂರಿನಲ್ಲಿ 42.2 ಮಿ.ಮೀ, ಈಶ್ವರಗೆರೆ 36 ಮಿ.ಮೀ, ಸೂಗೂರಿನಲ್ಲಿ 37.3 ಮಿ.ಮೀ, ಇಕ್ಕನೂರಿನಲ್ಲಿ 42.6 ಮಿ,ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 15.6 ಮಿ.ಮೀ, ಚಿತ್ರದುರ್ಗ -2ರಲ್ಲಿ 27.6 ಹಿರೇಗುಂಟನೂರು 5.2 ಮಿ.ಮೀ, ಐನಳ್ಳಿ 22.6 ಮಿ.ಮೀ, ಭರಮಸಾಗರ 17 ಮಿ.ಮೀ, ಸಿರಿಗೆರೆ 6.2 ಮಿ.ಮೀ, ತುರುವನೂರು 13.6 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರಿನ ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 47.2 ಮಿ.ಮೀ, ರಾಯಪುರ 31.1 ಮಿ.ಮೀ, ಬಿ.ಜಿ.ಕೆರೆ 33.8 ಮಿ.ಮೀ, ರಾಂಪುರ 15 ಮಿ.ಮೀ, ದೇವಸಮುದ್ರ 14.2 ಮಿ.ಮೀ ಮಳೆಯಾಗಿದೆ.
56 ಮನೆಗಳು ಭಾಗಶಃ ಹಾನಿ: ಭಾನುವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 56 ಮನೆಗಳು ಭಾಗಶಃ ಹಾನಿ, 02 ಮನೆಗಳು ತೀವ್ರ ಹಾನಿಗೆ ಒಳಗಾಗಿವೆ. ಚಿತ್ರದುರ್ಗ 12 ಮನೆಗಳು, ಹಿರಿಯೂರು 15, ಚಳ್ಳಕೆರೆ 15, ಹೊಸದುರ್ಗ 06, ಹೊಳಲ್ಕೆರೆ 07, ಮೊಳಕಾಲ್ಮೂರು 01 ಮನೆ ಭಾಗಶಃ ಹಾನಿಗೆ ಒಳಗಾಗಿವೆ. ಕೃಷಿ ಬೆಳೆಗೆ ಸಂಬಂಧಿಸಿದಂತೆ 50 ಹೆಕ್ಟೇರ್ ಪ್ರದೇಶ, ತೋಟಗಾರಿಕೆಗೆ ಸಂಬಂಧಿಸಿದಂತೆ 30 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ.
ಕಾಳಜಿ ಕೇಂದ್ರ ಪ್ರಾರಂಭ: ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿಯ ಪೂಜಾರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, ಒಟ್ಟು 38 ಮಂದಿ ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.