ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಗುಡುಗು ಸಹಿತ ಜೋರು ಮಳೆ ; ಇನ್ನೆಷ್ಟು ದಿನ ಬರಲಿದೆ ಮಳೆ..?

1 Min Read

 

ಬೆಂಗಳೂರು; ಬೇಸಿಗೆಯ ಬಿಸಿಯ ತಾಪ ಕಡಿಮೆಯಾಗಿ ಈಗ ಮಳೆಯ ವಾತಾವರಣ ಶುರುವಾಗಿದೆ. ಸಂಜೆಯ ವೇಳೆಗೆ ಬೆಂಗಳೂರಿನಲ್ಲಿ ಜೋರು ಮಳೆಯಾಗಿದೆ. ಅದರಲ್ಲೂ ಕೆಲಸದಿಂದ ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ಜೋರು ಮಳೆಯಾಗಿದೆ. ಇದರಿಂದ ಮನೆಗೆ ಹೋಗುವ ಸಿಬ್ಬಂದಿಗಳಿಗೆ ತೊಂದರೆಯಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗಂತೂ ಸಂಕಷ್ಟ ಎದುರಾಗಿದೆ. ಮಳೆಯ ಜೊತೆಗೆ ಮನೆಗೆ ಹೋಗುವಂತೆಯೂ ಇಲ್ಲ, ಮಳೆಯಲ್ಲಿ ನೆನೆಯುತ್ತಾ ಗಾಡಿ ಚಲಾಯಿಸುವುದಕ್ಕೂ ಸಾಧ್ಯವಿಲ್ಲ.

ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ರಸ್ತೆಗಳೆಲ್ಲ ತುಂಬಿ ತುಳುಕುತ್ತವೆ. ಇಂದು ಕೊಂಚ ಜಾಸ್ತಿಯೇ ಮಳೆ ಬಂದಿದ್ದು, ಟ್ರಾಫಿಕ್ ಜಾಸ್ತಿಯಾಗಿದೆ. ನಡೆದುಕೊಂಡು ಹೋಗುವವರಿಗೆ ಹರಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೆಬ್ಬಾಳ, ಸಂಜಯ ನಗರ, ಆರ್.ಟಿ.ನಗರ, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಗಾಂಧಿನಗರ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಕಾರ್ಪೋರೇಷನ್, ಯಶವಂತಪುರ ಭಾಗದಲ್ಲಿ ಜೋರು ಮಳೆಯಾಗಿದೆ.

ರಾಜ್ಯಾದ್ಯಂತ ಮಳೆ ಇನ್ನು ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 6ರ ತನಕ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ಬೇಸುಗೆಯ ಬಿಸಿಗೆ ಬೆಂದಿದ್ದ ಭೂಮಿಗೆ ಈಗ ವರುಣರಾಯ ತಣ್ಣನೆಯ ವಾತಾವರಣವನ್ನು ನಿರ್ಮಾಣ ಮಾಡಿದ್ದಾನೆ. ರಾಜ್ಯಾದ ಎಲ್ಲೆಡೆ ಉಷ್ಣಾಂಶ ಜಾಸ್ತಿಯಾಗುತ್ತು. ಈಗ ಆ ಉಷ್ಣಾಂಶವೆಲ್ಲಾ ಕಡಿಮೆಯಾಗಿದೆ. ತಣ್ಣನೆಯ ವಾತಾವರಣ ನಿರ್ಮಾಣವಾಗಿದೆ. ಇನ್ನು ಮುಂದೆ ಕೃಷಿ ಕೆಲಾಗಳು ಕೂಡ ಗರಿಗೆದರುತ್ತವೆ. ಮಳೆ ಬೆಳೆಯನ್ನು ನಂಬಿಕೊಂಡವರು ಭೂಮಿ ಉಳುಮೆಗೆ ಎಲ್ಲಾ ತಯಾರಿಯನ್ನು ಮಾಡುತ್ತಾರೆ. ಜೂನ್ ವೇಳೆಗೆ ಬೀಜ ಬಿತ್ತನೆ ಮಾಡುತ್ತಾರೆ. ಹೀಗಾಗಿ ಮಳೆಗಾಲ ಶುರುವಾಗುತ್ತಿದ್ದಂತೆ ರೈತರಿಗೆ ಖುಷಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *