ಬೆಂಗಳೂರು: ಮುಂಗಾರು ಮಳೆ ಇಷ್ಟೊತ್ತಿಗೆ ಜೋರಾಗಿಯೇ ಬರಬೇಕಿತ್ತು. ಆದರೆ ಆರಂಭದಲ್ಲಿ ಸ್ವಲ್ಪ ತಡವಾಗಿದೆ. ಇದೀಗ ಹವಮಾನ ಇಲಾಖೆ ನೀಡಿದ ಸೂಚನೆಯಂತೆ ಮುಂದಿನ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೈಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ಕರಾವಳಿ ಜಿಲ್ಲೆಯಲ್ಲಿ ಮಾತ್ರ 64 ಮಿಲಿ ಮೀಟರ್ ಮಳೆ ಸುರಿಯಲಿದೆ ಎಂದು ಹೇಳಿದೆ. ಬೆಂಗಳೂರು, ಕೋಲಾರ, ಮೈಸೂರು, ಕೊಡಗು, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕದಲ್ಲೂ ಗುಡುಗು ಸಹಿತ ಮಳೆ ಆಗುವ ಸಂಭವವಿದೆ. ಇಡೀ ರಾಜ್ಯಾದ್ಯಂತ ಅತೀ ಹೆಚ್ಚು ಎಂದರೆ 244.4 ಮಿಲಿ ಮೀಟರ್ ಮಳೆ ಬೀಳಲಿದೆ.
ಹೊರಗೆ ಹೋಗುವಾಗ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಮಳೆ ಚೆನ್ನಾಗಿ ಆಗಲಿ ಎಂದು ರೈತರು ಬೇಡಿಕೊಳ್ಳುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗಾಗಿ ಕಾಯುತ್ತಿದ್ದಾರೆ.