ಬೆಂಗಳೂರು: ಮುಂಗಾರು ಮಳೆ ಎಲ್ಲೆಲ್ಲೂ ತನ್ನ ಅಬ್ಬರವನ್ನು ಮುಂದುವರೆಸಿದೆ. ಆದ್ರೆ ಮಳೆ ಶುರುವಾದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ಈ ಬಾರಿ ಶೇ. 23ರಷ್ಟು ಮಳೆ ಕೊರತೆಯನ್ನು ಎದುರಿಸಲಿದೆ ಎನ್ನಲಾಗಿದೆ. ಆದರೆ ರಾಜ್ಯದ ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಮೂಲಗಳ ಪ್ರಕಾರ ರಾಜ್ಯ ಸರ್ಕಾರದಿಂದಾನೂ ಮೋಡ ಬಿತ್ತನೆಗೆ ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ಕೆಲವು ಕಡೆಗಳಲ್ಲಿ ಮಳೆ ಕೈಕೊಟ್ಟ ಹಿನ್ನೆಲೆ ಮೋಡ ಬಿತ್ತನೆ ಮಾಡುವ ಸಾಧ್ಯತೆ ಇದೆ. ರಾಣೇಬೆನ್ನೂರು ಹಾಗೂ ಹಾಸನ ಭಾಗದಲ್ಲಿ ಮೋಡ ಬಿತ್ತನೆ ಮಾಡಬಹುದು ಎಂದು ಹವಮಾನ ಇಲಾಖೆ ತಿಳಿಸಿದೆ. ಬೀದರ್, ಬೆಳಗಾವಿ, ಕೊಪ್ಪಳ, ಕಲಬುರಗಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸದ್ಯ ರೈತರು ಸಹ ಉತ್ತಮ ಮಳೆಗಾಗಿ ಕಾಯುತ್ತಿದ್ದಾರೆ. ಇದು ಕೃಷಿ ಮಾಡುವಂತ ಸಮಯವಾಗಿದೆ. ಹೀಗಾಗಿ ಮಳೆ ಉತ್ತಮವಾಗಿ ಬಂದರೆ ಬೆಳೆಯೂ ಉತ್ತಮವಾಗಿ ಇರಲಿದೆ. ಈಗಾಗಲೇ ಮಳೆ ಇಲ್ಲದೆ ತರಕಾರಿ ದರಗಳು ಮುಗಿಲು ಮುಟ್ಟಿದೆ. ಜನಸಾಮನ್ಯರು ಕೂಡ ದರದ ಬಿಸಿಯಿಂದ ಸಮಾಧಾನಗೊಳ್ಳಬೇಕು ಅಂದ್ರೆ ಮೊದಲು ಉತ್ತಮ ಮಳೆಯಾಗಬೇಕಿದೆ.