ಮಳೆಯಿಂದಾಗಿ ರಾಜಧಾನಿಯಲ್ಲಿ ಅವಾಂತರ : ರಸ್ತೆಗಳೆಲ್ಲಾ ನೀರೋ ನೀರು..!

suddionenews
1 Min Read

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧೆಡೆ ಗುರುವಾರ ಭಾರಿ ಮಳೆಯಾಗಿದೆ. ಬೆಂಗಳೂರಿನಲ್ಲೂ ಹಲವೆಡೆ ರಾತ್ರಿ ವೇಳೆಯಲ್ಲಿ ಭಾರಿ ಸುರಿದಿದೆ.

ಭಾರಿ ಮಳೆಯಿಂದಾಗಿ ಶಾಂತಿನಗರದ ರಸ್ತೆಗಳ ತುಂಬೆಲ್ಲಾ ನೀರು ನಿಂತಿತ್ತು. ಶಾಂತಿನಗರದ ಲಾಲ್ ಭಾಗ್, ಡಬಲ್ ರೋಡ್ ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದೆ. ವಾಹನಗಳು ಮುಂದೆ ಹೋಗಲಾರದೆ ಕಾರುಗಳು, ಬೈಕ್ ಗಳು ನಿಂತಲ್ಲೇ ನಿಂತಿದ್ದವು. ವಾಹನ ಸವಾರರಂತು ಮಧ್ಯರಾತ್ರಿಯಾಗುತ್ತಾ ಬಂದರೂ ಪರದಾಡುತ್ತಿದ್ದಾರೆ.

ನಗರದ ಪ್ರಮುಖ ರಸ್ತೆ ಜೆ.ಸಿ ರಸ್ತೆಯ ಸುತ್ತ ಮುತ್ತ ಮೋರಿಗಳು ಕಟ್ಟಿಕೊಂಡು ರಸ್ತೆಗಳು ಕೆರೆಯಂತಾಗಿದ್ದವು. 3 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿವೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಆದರೆ ಸಂಭ್ರಮಕ್ಕೆ ಮಳೆರಾಯ ತಣ್ಣೀರು ಎರಚಿದ್ದಾನೆ. ಇನ್ನೂ ನಾಲ್ಕು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸಹ ಮಾಹಿತಿ ನೀಡಿದೆ.

ಇನ್ನು ಬೆಂಗಳೂರಿನಲ್ಲಿ ಮಳೆ ಬಂದಿರುವ ಪ್ರದೇಶಗಳಲ್ಲಿ ಬಿಬಿಎಂಪಿಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿಯನ್ನ ಸಹಜ ಸ್ಥಿತಿಗೆ ತರಲು ಯತ್ನಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *