ಚಳ್ಳಕೆರೆ : ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು ಈಗಾಗಲೇ ಚಿಕ್ಕ ಮದುರೆ ಕೆರೆ ಕೋಡಿ ಬಿದ್ದಿದ್ದು 4 ಅಡಿ ನೀರು ಕೋಡಿಯಲ್ಲಿ ಹಾದು ಹೋಗುತ್ತಿದ್ದು, ಈ ಕೆರೆಯ ನೀರಿನಿಂದ ರಾಣಿಕೆರೆ ತುಂಬುವ ಮುನ್ಸೂಚನೆಯಿದ್ದು ಕೆರೆಯ ಆಸುಪದಾಸಿನಲ್ಲಿ ಸಾರ್ವಜನಿಕರು ಮಕ್ಕಳು ಮತ್ತು ವೃದ್ಧರನ್ನು ಸುರಕ್ಷಿತವಾಗಿರುವಂತೆ ಎಚ್ಚರ ವಹಿಸಬೇಕು ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ಚಿಕ್ಕಮಧುರೆ ಕೆರೆಯು ಕೋಡಿ ಬಿದ್ದು ಹೆಚ್ಚುವರಿಯಾಗಿ ನೀರು ಹರಿಯುತ್ತಿದ್ದು, ಗ್ರಾಮಸ್ಥರ ಆತಂಕ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಿದರು.
ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರ ರವಿಕುಮಾರ್ ಇವರಿಗೆ ಸೂಚನೆ ನೀಡಿ ಇದರಿಂದ ಯಾವುದೇ ಅನಾಹುತ ಆಗದಂತೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಆಗದಂತೆ ಕ್ರಮವಹಿಸಲು ಸೂಚಿಸಿದರು.
ರಾಮಜೋಗಿಹಳ್ಳಿ ಗ್ರಾಮದಲ್ಲಿ ಕೆರೆಯ ಹಿಂಭಾಗದಲ್ಲಿರುವ ತಡೆಗೋಡೆ ಕುಸಿದಿದ್ದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಶ್ರೀಮತಿ ಕಾವ್ಯ ಅವರಿಗೆ ಸೂಚಿಸಿದರು. ಕೆರೆಯ ಆಸುಪಾಸಿನಲ್ಲಿ ವಾಸಿಸುವ ಜನರಿಗೆ ಕಟ್ಟೆಚ್ಚರವಹಿಸುವಂತೆ ಸ್ಥಳೀಯವಾಗಿ ಪ್ರಚಾರ ಕಾರ್ಯ ಕೈಗೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ರಾಜಸ್ವ ನಿರೀಕ್ಷಕರ ಲಿಂಗೇಗೌಡ ಉಪಸ್ಥಿತರಿದ್ದರು.