ಬೆಂಗಳೂರು: ನಿನ್ನೆ ರಾತ್ರಿ ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆ ಬಾರೀ ಅವಾಂತರ ಸೃಷ್ಟಿಸಿದೆ. ಎಷ್ಟೋ ಮನೆಗಳಿಗೆ ನೀರಿ ನುಗ್ಗಿದೆ. ತಗ್ಗು ಪ್ರದೇಶದಲ್ಲಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಮಳೆ ನೀರನ್ನ ಹಿರ ಹಾಕೋದೆ ದೊಡ್ಡ ಕೆಲಸವಾಗೋಗಿದೆ.
ಇದಕ್ಕೆ ಒಳ್ಳೆ ಹುಡುಗ ಪ್ರಥಮ್ ಕೂಡ ಹೊರತಾಗಿಲ್ಲ. ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಪ್ರಥಮ್ ಕಚೇರಿಗೆ ನೀರು ತುಂಬಿದೆ. ಮಳೆ ನೀರಿನಿಂದಾಗಿ ಕಚೇರಿಯಲ್ಲಿದ್ದ ವಸ್ತುಗಳು ನೀರಿಗಾಹುತಿಯಾಗಿದೆ.
https://twitter.com/OPratham/status/1444769764870557703?t=qpr1zOFldJoXtwUo1hdg-Q&s=19
ಕಚೇರಿಯಲ್ಲಿದ್ದ 2.5ಲಕ್ಷ ಮೌಲ್ಯದ ವಸ್ತುಗಳು ಮಳೆಯಿಂದ ಹಾಳಾಗಿವೆ. ನಟ ಭಯಂಕರ ಸಿನಿಮಾದ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ ನೀರು ಪಾಲಾಗಿದೆ. ಕರ್ನಾಟಕ ಅಳಿಯ ಸಿನಿಮಾದ ಸೆಟ್ ಪ್ರಾಪರ್ಟಿಯೂ ನೀರು ಪಾಲಾಗಿದ್ದು, ಪ್ರಥಮ್ ಸಂಕಟಕ್ಕೀಡಾಗಿದ್ದಾರೆ.
ಅಷ್ಟೇ ಅಲ್ಲ ಹಲವು ಸಿನಿಮಾ ಸ್ಕ್ರಿಪ್ಟ್ ಗಳು ನೀರು ಪಾಲಾಗಿದೆ. ವಾಕಿಂಗ್ ಹೋಗುವಾಗ ಕಚೇರಿಯ ಕಿಟಕಿ ತೆಗೆದು ಹೋಗಿದ್ದಿದ್ದೆ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ.