ತಾಯಿಯೇ ಹೆತ್ತ ಮಕ್ಕಳನ್ನು ಕೊಂದ ಹೃದಯ ವಿದ್ರಾವಕ ಘಟನೆ : ಗಂಡ-ಹೆಂಡತಿಯೂ ನೇಣಿಗೆ ಶರಣು..!

suddionenews
1 Min Read

ಬೆಂಗಳೂರು: ತನಗೆ ಏನೇ ಕಷ್ಟ ಬಂದರು ಮಕ್ಕಳಿಗೆ ಸದಾ ಬೆಂಗಾವಲಾಗಿ ಇರುವವಳು ತಾಯಿ. ಮಕ್ಕಳಿಗೆ ಸುಖ ಸಂತೋಷ ನೀಡುವತ್ತ ಗಮನ ಹರಿಸುತ್ತಾಳೆ. ಮಕ್ಕಳನ್ನ ಬೈಯ್ಯುವಾಗ ಯಾರಾದರೂ ನಿನ್ನ ಸಾವು ಎಂಬ ಮಾತುಗಲಕನ್ನಾಡಿದರೇನೆ ಆ ತಾಯಿ ಸಹಿಸಲ್ಲ. ಆದರೆ ಈ ತಾಯಿಯ ಮನಸ್ಸು ಅದೇನಾಯ್ತೋ ಏನೋ. ತನ್ನಿಬ್ಬರು ಮಕ್ಕಳನ್ನು ಕೊಂದು, ತಾನು ಸಾವಿಗೆ ಶರಣಾಗಿದ್ದಾಳೆ. ಮನೆಗೆ ಬಂದ ಗಂಡ ಈ ದೃಶ್ಯವನ್ನೆಲ್ಲ ನೋಡಿ ತಾನೂ ನೇಣಿಗೆ ಕೊರಳೊಡ್ಡಿದ್ದಾನೆ. ಈ ಘಟನೆ ನಡೆದಿರೋದು ಯಲಹಂಕದ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ.

38 ವರ್ಷ ಅವಿನಾಶ್, 30 ವರ್ಷದ ಮಮತಾ, 5 ವರ್ಷದ ಅಧೀರಾ, ಎರಡೂವರೆ ವರ್ಷದ ಮತ್ತೊಂದು ಮಗು ಸಾವನ್ನಪ್ಪಿರುವುದು. ಅವಿನಾಶ್ ಕಲಬುರಗಿ ಮೂಲದವರು. ಬೆಂಗಳೂರಿಗೆ ಬಂದು ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಬದುಕು ಕಟ್ಟಿಕೊಳ್ಳಲು ಬಂದಿದ್ದವರು ಬದುಕನ್ನೇ ಅಂತ್ಯ ಮಾಡಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ತಾಯಿಯೇ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅವಿನಾಶ್ ನಿನ್ನೆ ಸಂಹೆ ತನ್ನ ಪತ್ನಿ ಮಮತಾಗೆ ಅನೇಕ ಬಾರಿ ಕರೆ ಮಾಡಿದ್ದಾರೆ. ಆದರೆ ಪತ್ನಿ ಕಾಲ್ ರಿಸೀವ್ ಮಾಡಿಲ್ಲ. ಬಳಿಕ ಮನೆಯ ಮೇಲುಗಡೆ ಇರುವವರಿಗೆ ಕರೆ ಮಾಡಿ, ತನ್ನ ಹೆಂಡತಿಗೆ ಕೊಡುವಂತೆ ಹೇಳಿದ್ದಾರೆ. ಅವರು ಬಂದು ಬಾಗಿಲು ತಟ್ಟಿದರು ತೆರೆದಿರಲಿಲ್ಲ. ಸುಮ್ಮನಾದ ಪತಿ ಅವಿನಾಶ್ ರಾತ್ರಿ ಒಂಭತ್ತರ ಸುಮಾರಿಗೆ ಬಂದು, ತನ್ನಲ್ಲಿದ್ದ ಇನ್ನೊಂದು ಕೀ ಬಳಸಿ ಒಳಗೆ ಹೋಗಿದ್ದಾರೆ. ಮಕ್ಕಳು, ಹೆಂಡತಿ ಸತ್ತಿರುವುದನ್ನು ಕಂಡು, ಹೆಂಡತಿಯನ್ನು ನೇಣು ಕುಣಿಕೆಯಿಂದ ಕೆಳಗಿಳಿಸಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಹಣಕಾಸಿನ ಸಮಸ್ಯೆಯೇ ಕುಟುಂಬದ ಸಾವಿಗರ ಕಾರಣ ಎನ್ನಲಾಗುತ್ತಿದೆ. ಸದ್ಯ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *