ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಬೆಳಗ್ಗೆಯಿಂದ ಓಡಾಡುತ್ತಿದೆ. ಪೋಟೋ ನೋಡಿದವರೆಲ್ಲ ಮರುಕಗೊಳ್ಳುತ್ತಿದ್ದಾರೆ. ಯಾಕಂದ್ರೆ ತನ್ನ ತಂದೆಯ ಧ್ವಂಸವಾದ ಅಂಗಡಿಯಲ್ಲಿ ಹುಡುಗ ಕಾಯಿನ್ ಗಳನ್ನು ಆಯ್ದುಕೊಳ್ಳುತ್ತಿದ್ದಾನೆ ಇದು ಮನಸ್ಸನ್ನು ಘಾಸಿಗೊಳಿಸಿದೆ.
ಕಳೆದ ಕೆಲವು ದಿನಗಳಿಂದ ಜಹಾಂಗೀರ್ ಪುರಿಯಲ್ಲಿ ಬುಲ್ಡೋಜ್ಹರ್ ಗಳಿಂದ ಕಟ್ಟಡಗಳನ್ನು ಧ್ವಂಸ ಮಾಡಲಾಗಿದೆ. ಇಂಥದ್ದೆ ಸಂದರ್ಭದಲ್ಲಿ ಆ ಬಾಲಕನ ತಂದೆಯ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
This is really Heart Wrenching.
A boy collecting coins..@ArvindKejriwal @AamAadmiParty @msisodia @AtishiAAP @ImranHussaain @DelhiPolice pic.twitter.com/Dyip7iIe3e
— (دانش رشی) 🍁Er Danish Reshi (@DanishReshi_) April 20, 2022
ತಂದೆಯ ಜ್ಯೂಸ್ ಅಂಗಡಿ ಕೂಡ ನೆಲ ಸಮವಾಗಿದ್ದು, ಆ ಬಾಲಕ ಕಾಯಿನ್ ಗಳನ್ನು ಆಯ್ದುಕೊಳ್ಳುತ್ತಿದ್ದಾನೆ. ಈ ಫೋಟೋವನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಫೋಟೋ ಹಾಕಿ ಇಂತ ಕೆಲಸ ಮಾಡುತ್ತಿರುವ ಪಾಲಿಕೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹನುಮ ಜಯಂತಿ ಮೆರವಣಿಗೆ ವೇಳೆ ದೆಹಲಿಯ ಜಹಾಂಗಿರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಉಂಟಾಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ನೇತೃತ್ವದ ಪಾಲಿಕೆ ಅವರಿಗೆ ಬಿಸಿ ಮುಟ್ಟಿಸಲು ಯೋಚಿಸಿ, ಬುಲ್ಡೋಜರ್ ಗಳಿಂದ ಕಟ್ಟಡಗಳ ಧ್ವಂಸ ಮಾಡಲು ನಿಂತಿದೆ. ಕೇಂದ್ರ ಗೃಹ ಇಲಾಖೆಯ ಸೂಚನೆ ಮೇರೆಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ನೆಲಸಮಕ್ಕೆ ಮುಂದಾಗಿದೆ.