ಸುದ್ದಿಒನ್ : ಚೆನ್ನಾಗಿ ಮಾತನಾಡುತ್ತಾ ಸ್ನೇಹಿತರೊಂದಿಗೆ ಹಾಸ್ಯ ಚಟಾಕಿ ಹಾರಿಸುತ್ತಿದ್ದವರು ಏಕಾಏಕಿ ಕುಸಿದು ಬೀಳುತ್ತಿದ್ದಾರೆ. ಹದಿಹರೆಯದವರು ಮತ್ತು ಯುವಕರು ಸಹ ಹೃದಯಾಘಾತದಿಂದ ಬಳಲುತ್ತಿದ್ದಾರೆ.
ಯಾವುದೇ ಕಾಯಿಲೆಯ ಇತಿಹಾಸ ಇಲ್ಲದಿದ್ದರೂ ಹೃದಯಾಘಾತವಾಗುತ್ತಿದೆ. ಜಿಮ್‌ಗೆ ಹೋಗುವವರು, ಫಿಟ್ ಆಗಿರುವವರು ಮತ್ತು ಉತ್ತಮ ಆಹಾರ ಕ್ರಮವನ್ನು ಅನುಸರಿಸುವವರೂ ಒಮ್ಮೆಲೇ ಸಾಯುತ್ತಿದ್ದಾರೆ. ಇತ್ತೀಚೆಗೆ, ಅಂತಹ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ. ರಕ್ತನಾಳಗಳು ನಿರ್ಬಂಧಿಸಲ್ಪಟ್ಟಾಗ ಮತ್ತು ಹೃದಯಕ್ಕೆ ಸರಿಯಾಗಿ ರಕ್ತವನ್ನು ಪೂರೈಸಲು ಸಾಧ್ಯವಾಗದಿದ್ದಾಗ ಹೃದಯಾಘಾತ ಸಂಭವಿಸಬಹುದು. ಹೃದಯಾಘಾತಕ್ಕೂ ಮುನ್ನ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ತಿಳಿಯೋಣ…
• ಹೊಟ್ಟೆಯಲ್ಲಿ ಗ್ಯಾಸ್ ತುಂಬಿದ ಭಾವನೆ
• ವಿಪರೀತ ಆಯಾಸ
• ಹೊಟ್ಟೆಯಲ್ಲಿ ತೀವ್ರವಾದ ನೋವು
• ಭುಜಗಳು ಮತ್ತು ಕುತ್ತಿಗೆಯಲ್ಲಿ ನೋವು
• ಎದೆಯಲ್ಲಿ ಒತ್ತಡ
• ಹೊಟ್ಟೆ ಉಬ್ಬುವುದು
• ಗಂಟಲಿನಲ್ಲಿ ಏನೋ ತೊಂದರೆಯುಂಟಾಗಿ ಅಸೌಕರ್ಯದ ಭಾವನೆ
• ದೇಹವು ನಿತ್ರಾಣವಾದಂತೆ ಅನಿಸುವುದು
• ಎಡಗೈ ನೋವು
• ವಿಪರೀತ ಬೆವರುವುದು
• ನೋವಿನ ಸಂವೇದನೆ ಹೃದಯದಿಂದ ಹಿಂಭಾಗಕ್ಕೆ ಚಲಿಸುತ್ತದೆ
ಈ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಹೃದಯಾಘಾತದ ಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚಿದರೆ ಜೀವ ಉಳಿಸಲು ಅವಕಾಶವಿದೆ. ಹೃದಯಾಘಾತಕ್ಕೆ ಜೀವನಶೈಲಿಯ ಬದಲಾವಣೆಯೇ ಮುಖ್ಯ ಕಾರಣ ಎನ್ನುತ್ತಾರೆ ವೈದ್ಯರು. ಧೂಮಪಾನ, ಮದ್ಯಪಾನ, ಮೈದಾ ಹಿಟ್ಟು ಮತ್ತು ಕೊಬ್ಬಿನ ಆಹಾರಗಳ ಹೆಚ್ಚಿನ ಸೇವನೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ.
ಅಲ್ಲದೇ ಹೊಸದಾಗಿ ಜಿಮ್ ಗೆ ಬಂದಾಗ ಒಮ್ಮೆಲೇ ಭಾರವಾದ ಮತ್ತು ಕಷ್ಟದ ಅಭ್ಯಾಸಗಳನ್ನು ಮಾಡದೇ ಸಣ್ಣ ಪುಟ್ಟ ಕಸರತ್ತು ಮಾಡಬೇಕು. ಉತ್ತಮ ಆಹಾರ ಸೇವನೆ, ಧೂಮಪಾನ, ಮದ್ಯಪಾನ, ಮಾದಕ ದ್ರವ್ಯ ಸೇವನೆಯಿಂದ ದೂರವಿರುವುದು ಮತ್ತು ನಿಯಮಿತ ವ್ಯಾಯಾಮ ನಿಮ್ಮ ಹೃದಯವನ್ನು ರಕ್ಷಿಸುತ್ತದೆ ಎನ್ನುತ್ತಾರೆ ತಜ್ಞರು.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)