Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಡುಮಲ್ಲೇಶ್ವರ ಮೃಗಾಲಯದ ಸಿಬ್ಬಂದಿಗೆ ಆರೋಗ್ಯ ತಪಾಸಣೆ : ರೇಬೀಸ್ ನಿಯಂತ್ರಣಕ್ಕೆ ಎಆರ್‌ವಿ ಮುಂಜಾಗ್ರತಾ ಲಸಿಕೆ ಪರಿಣಾಮಕಾರಿ : ಡಾ.ಬಿ.ವಿ.ಗಿರೀಶ್

Facebook
Twitter
Telegram
WhatsApp

ಚಿತ್ರದುರ್ಗ.ಸೆ.21: ಪ್ರಾಣಿ ಕಡಿತದಿಂದ ಉಂಟಾಗುವ ರೇಬೀಸ್ ನಿಯಂತ್ರಣಕ್ಕೆ ಎಆರ್‌ವಿ ಮುಂಜಾಗ್ರತಾ ಲಸಿಕೆ ಪರಿಣಾಮಕಾರಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಶನಿವಾರ ಆರೋಗ್ಯ ಇಲಾಖೆ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಸಲುವಾಗಿ ಮೃಗಾಲಯದ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಪ್ರಾಣಿಗಳೊಂದಿಗೆ ಸಂಪರ್ಕ ಹೊಂದಿರುವ ಮೃಗಾಯಲದ ಸಿಬ್ಬಂದಿಗಳು ಪ್ರಾಣಿ ಕಡಿತದಿಂದ ಉಂಟಾಗುವ ರೇಬೀಸ್ ಕಾಯಿಲೆಗೆ ತುತ್ತಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ, ಈ ದಿನ ನಿಮ್ಮಲ್ಲರಿಗೂ ಉಚಿತವಾಗಿ ಕ್ಷಯರೋಗ ರೋಗ ಪರೀಕ್ಷೆ, ಹೆಚ್.ಐ.ವಿ.ಪರೀಕ್ಷೆ, ಮಧುಮೇಹ, ರಕ್ತದೊತ್ತಡದ ಲಿವರ್ ಕಾರ್ಯಕ್ಷಮತೆ ಪರೀಕ್ಷೆ, ಸಣ್ಣಪುಟ್ಟ ಕಾಯಿಲೆಗಳ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.

ವಲಯ ಅರಣ್ಯಾಧಿಕಾರಿ ಐ.ಬಿ.ಅಕ್ಷತಾ ಮಾತನಾಡಿ, ಎಲ್ಲಾ ಸಿಬ್ಬಂದಿಗಳು ತಪ್ಪದೇ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ನೀವು ಕೆಲಸ ಮಾಡುವ ಜಾಗಕ್ಕೆ ಆರೋಗ್ಯ ಇಲಾಖೆ ವಿವಿಧ ತಂಡಗಳು ಬಂದಿದೆ ಸದುಪಯೋಗ ಪಡಿಸಿಕೊಳ್ಳಿ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸ್ವಚ್ಛ ಅಭ್ಯಾಸವನ್ನು ಮಾಡಿ ಅಂದರೆ ತಂಬಾಕು ಜಗಿಯುವುದು, ಧೂಮಪಾನ, ಮದ್ಯಪಾನ ಮಾಡುವ ಹವ್ಯಾಸವನ್ನು ಬಿಡಿ. ಕ್ಷಯರೋಗ ಇತರೆ ಶ್ವಾಸಕೋಶದ ಸೋಂಕಿಗೆ ತುತ್ತಾಗದಂತೆ ಸ್ವಚ್ಛ ನಡವಳಿಕೆಗಳನ್ನು ಕಾಪಾಡಿಕೊಳ್ಳಿ. ದೈಹಿಕ ಮಾನಸಿಕ ಆರೋಗ್ಯ ಪಡೆದುಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ 28 ಜನ ಸಿಬ್ಬಂದಿ ಅಧಿಕಾರಿಗಳಿಗೆ ರೇಬೀಸ್ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಲಸಿಕೆ ನೀಡಿ, ವಿವಿಧ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.
ಕ್ಷೇತ್ರ ಆರೋಗಶಿಕ್ಷಣಾಧಿಕಾರಿಗಳಾದ ಬಿ.ಮೈಗಪ್ಪ, ಜಾನಕಿ, ಸಂಚಾರಿ ಆರೋಗ್ಯ ಘಟಕದ ಡಾ.ಮಂಜರಿ, ತ್ರಿವೇಣಿ, ಲಕ್ಷ್ಮೀದೇವಿ, ಸಲ್ಮನ್ ಖಾನ್, ಶಂಕರಮೂರ್ತಿ, ಶ್ರೀ ನಿವಾಸ, ಕ್ಷಯರೋಗ ವಿಭಾಗದ ಮಾರುತಿ ,ನಾಗರಾಜ್ ಹೆಚ್.ಐ.ವಿ.ವಿಭಾಗದ ರವೀಂದ್ರ, ನಾಗರಾಜ್ ಉಪ ವಲಯ ಆರಣ್ಯಾಧಿಕಾರಿ ವೆಂಕಟೇಶ ನಾಯ್ಕ್ ಇತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೈ ಮಹಾರಾಷ್ಟ್ರ: ಬಿಜೆಪಿ ಮೈತ್ರಿಕೂಟದ ಭರ್ಜರಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ….!

    ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದೆ. ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಭೂತಪೂರ್ವ ಯಶಸ್ಸು ಸಾಧಿಸಿದೆ. ಒಂದು ಕಡೆ ಶಿವಸೇನೆ ಇನ್ನೊಂದೆಡೆ ಎನ್‌ಸಿಪಿ ನಡುವಿನ

ಸತತ 5ನೇ ದಿನವೂ ಏರಿಕೆಯತ್ತ ಚಿನ್ನದ ದರ : ಇಂದು ಎಷ್ಟಿದೆ ನೋಡಿ..!

ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಸತತ ಐದನೇ ದಿನಕ್ಕೂ ಏರಿಕೆಯತ್ತಲೇ ಮುಖ ಮಾಡಿದೆ. ದೀಪಾವಳಿಯ ಬಳಿಕ ಕಂಚ ಇಳಿಕೆ ಕಂಡು ಎಲ್ಲರಿಗೂ ಖುಷಿ ಕೊಟ್ಟಿದ್ದ ಚಿನ್ನ ಶಾಕ್ ಆಗಿವಷ್ಟು

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

error: Content is protected !!