ಸರ್ಕಾರಿ ಕೆಲಸ ಬಿಡಿಸಿ, ಎಲೆಕ್ಷನ್ ಗೆ ನಿಲ್ಲಿಸಿ ಸೋಲಿಸಿದ್ದರು : ದೇವೇಗೌಡರ ಬಗ್ಗೆ ಮಾತನಾಡಿದ ನಟ ಶ್ರೀನಿವಾಸ್ ಮೂರ್ತಿ

ಬೆಂಗಳೂರು: 1973ರಲ್ಲಿ ಚಿತ್ರರಂಗವನ್ನು ಪ್ರವೇಶ ಮಾಡಿದ್ದವರು ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರು. ಸದ್ಯ ಧಾರಾವಾಹಿ ಮತ್ತು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಎಲ್ಲರ ಗಮನ ಸೆಳೆದಿರುವ ಶ್ರೀನಿವಾಸ್ ಮೂರ್ತಿಯವರು ಹಲವು ಸ್ವಾರಸ್ಯಕರ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ನಟನೆಗೂ ಮುನ್ನ ಶ್ರೀನಿವಾಸ್ ಮೂರ್ತಿ ಅವರು ಸರ್ಕಾರಿ ನೌಕರಿಯಲ್ಲಿದ್ದರಂತೆ. ಅದನ್ನು ಬಿಡುವುದಕ್ಕೆ ದೇವೇಗೌಡ ಅವರೇ ಕಾರಣರಾಗಿದ್ದರಂತೆ. ಈ ಬಗ್ಗೆ ಮಾತನಾಡಿದ ಶ್ರೀನಿವಾಸ ಮೂರ್ತಿ ಅವರು, “ಆಗ ನಾನು ಸರ್ವೇ ಇಲಾಖೆಯಲ್ಲಿ ಕೆಲಸದಲ್ಲಿದ್ದೆ. ದೇವೇಗೌಡ ಅವರು ಮಾಡಿದ ಕೆಲಸ. ರಾಜೀನಾಮೆ ಕೊಡಿಸಿ ದೊಡ್ಡಬಳ್ಳಾಪುರದ ಎಂಎಲ್ಸಿಗೆ ನಿಲ್ಲಿಸಿ, ಸೋಲಿಸಿದ್ದರು. ನಮ್ಮ ಜಾತಿಯವರೆಲ್ಲ ನಮಗೆ ವೋಟು ಮಾಡುತ್ತಾರೆ ಎಂದುಕೊಂಡಿದ್ದರು. ಆದರೆ ಅಲ್ಲಿ ಇದ್ದದ್ದೆಲ್ಲಾ ನೇಕಾರರು” ಎಂದಿದ್ದಾರೆ.

“ನನ್ನ ಎದುರಾಳಿ ಆರ್ ಎಲ್ ಜಾಲಪ್ಪ ಅವರ ಬಗ್ಗೆ ಗೊತ್ತಿರಲಿಲ್ಲ. ಅವರು ಅದಾಗಲೇ ನೇಕಾರರಿಗೆ ಸಹಾಯ ಮಾಡಿದ್ದರಿಂದ ಅವರ ಮೇಲೆ ಒಲವಿತ್ತು. ವೋಟು ಕೇಳಲು ಹೋದಾಗ ನೀವ್ಯಾಕ್ರೀ ನಿಂತುಕೊಂಡ್ರಿ. ನಾವೂ ಜಾಲಪ್ಪ ಅವರಿಗೆ ವೋಟ್ ಹಾಕೋದು. ಬನ್ನಿ ಕಾಫಿ ಕುಡಿರಿ ಅಂತ ಹೇಳ್ತಾ ಇದ್ರು ಅಂತ ಆ ದಿನಗಳನ್ನು ನೆನೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!