ತುಮಕೂರು: ಇತ್ತಿಚೆಗೆ ಜಿಲ್ಲೆಯ ಕುಚ್ಚಂಗಿ ಕೆರೆಯಲ್ಲಿ ಕಾರಿನ ಒಳಗೆ ಸುಟ್ಟು ಕರಕಲಾದ ಮೂರು ಮೃತದೇಹಗಳು ಪತ್ತೆಯಾಗಿದ್ದವು. KA 43 ನಂಬರ್ ಪ್ಲೇಟ್ ಕಾರು ಇದಾಗಿತ್ತು. ಕಾರಿನ ಒಳಗೆ ಸುಟ್ಟು ಕರಕಲಾಗಿದ್ದ ಕಾರಿನಲ್ಲಿ ಮೃತದೇಹಗಳ ಪತ್ತೆಯಾಗಿರಲಿಲ್ಲ. ಇದೀಗ ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಸತ್ಯತೆ ಹೊರ ಬಿದ್ದಿದೆ. ಚಿನ್ನದ ಆಸೆಗೆ ಬಂದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದ್ದು, ಮೃತರ ಗುರುತು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 56 ವರ್ಷದ ಇಸಾಕ್, 45 ವರ್ಷದ ಸಾಹುಲ್, 34 ವರ್ಷದ ಇಮ್ಮಿಯಾಜ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಸ್ವಲ್ಪವೂ ಗುರುತೇ ಸಿಗದಂತೆ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಆರೋಪಿ ಸ್ವಾಮಿ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ.
ಆರೋಪಿ ನಮ್ಮ ಜಮೀನಿನಲ್ಲಿ ಚಿನ್ನದ ಹಂಡೆ ಸಿಕ್ಕಿದೆ. ಅದನ್ನು ಕಡಿಮೆ ಹಣಕ್ಕೆ ಮಾರಾಟ ಮಾಡುತ್ತೇವೆ ಎಂದು ಮೂವರನ್ನು ಕರೆಸಿಕೊಂಡಿದ್ದಾರೆ. ಚಿನ್ನದ ಆಸೆಗೆ ಬಿದ್ದು ಮೂವರು ಮೃತರು ಬೆಳ್ತಂಗಡಿಯಿಂದ ಬಂದಿದ್ದಾರೆ. ಚಿನ್ನ ಖರೀದಿಗಾಗಿ ಹಣವನ್ನು ತಂದಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಇಸಾಕ್ ಇನ್ನುಬ್ಬರನ್ನು ಜಿತೆಗೆ ಕರೆದುಕೊಂಡು, ಸ್ನೇಹಿತನ ಕಾರನ್ನು ತೆಗೆದುಕೊಂಡು ಬಂದಿದ್ದಾರೆ. ಹಣವನ್ನು ಕಂಡ ಆರೋಪಿಗಳು ಮೂವರನ್ನು ಕೈ ಕಾಲು ಕಟ್ಟಿ ಕಾರಿನಲ್ಲಿ ಹಾಕಿದ್ದಾರೆ. ಗುರುತೇ ಸಿಗದಂತೆ ಸುಟ್ಟು ಕರಕಲು ಮಾಡಿದ್ದಾರೆ. ಈ ಕೇಸ್ ಹಿಂದೆ ಬಿದ್ದ ತುಮಕೂರು ಎಸ್ ಪಿ ಅಶೋಕ್ ಕೆ ವಿ, ಆರೋಪಿಗಳನ್ನು ಹುಡುಕಿ ಬಂಧಿಸಿದ್ದಾರೆ.