ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಜಿ ಟಿ ದೇವೇಗೌಡ ಅವರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದರು. ಈ ಮಧ್ಯೆ ಹಲವು ಬೆಳವಣಿಗೆ ಕೂಡ ನಡೆದಿತ್ತು. ಜಿಟಿಡಿ ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದ್ದವು. ಆದರೆ ಇದೀಗ ನಡೆದ ಸಂಧಾನ ಸಭೆಯಲ್ಲಿ ಜಿಟಿಡಿ ಜೆಡಿಎಸ್ ನಲ್ಲಿಯೇ ಉಳಿಯಲಿದ್ದಾರೆ ಎಂಬುದು ನಿಶ್ಚಯವಾಗಿದೆ.

ಜಿ ಟಿ ದೇವೇಗೌಡ ಅವರ ಜೊತೆಗೆ ಹೆಚ್ ಡಿ ದೇವೇಗೌಡ ಅವರು ನಡೆಸಿದ ಸಂಧಾನ ಸಭೆ ಸಕ್ಸಸ್ ಆಗುತ್ತೆ ಎಂಬ ಮಾತುಗಳು ಕೇಳಿ ಬಂದಿದೆ. ಜಿಟಿಡಿ ಅವರು ಜೆಡಿಎಸ್ ನಲ್ಲಿಯೇ ಉಳಿಯುವುದು ಬಹುತೇಕ ಖಚಿತವಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಅವರು ಜಿಟಿಡಿ ಜೊತೆಗೆ ಒಂದಷ್ಟು ಸಮಯ ಮಾತುಕತೆ ನಡೆಸಿದ್ದು, ಅವರ ಸಂಧಾನಕ್ಕೆ ಜಿಟಿಡಿ ಒಪ್ಪಿದ್ದಾರೆ ಎನ್ನಲಾಗಿದೆ.

ಜಿಟಿ ದೇವೇಗೌಡ ಅವರು ಡಿಮ್ಯಾಂಡ್ ಒಂದನ್ನು ಇಟ್ಟಿದ್ದರು. ಅದುವೇ ಹುಣಸೂರು ಕ್ಷೇತ್ರದಿಂದ ಮಗನಿಗೆ ಟಿಕೆಟ್ ನೀಡಬೇಕು ಎಂಬುದು. ಇದೀಗ ಆ ಡಿಮ್ಯಾಂಡ್ ಗೆ ದೇವೇಗೌಡ ಅವರು ಒಪ್ಪಿದ್ದಾರೆ ಎನ್ನಲಾಗಿದೆ. ನಾಳೆ ಜಿಟಿಡಿ ಮನೆಗೆ ಹೆಚ್ ಡಿ ದೇವೇಗೌಡ ಅವರು ಭೇಟಿ ನೀಡಲಿದ್ದಾರೆ. ಹುಣಸೂರು ಕ್ಷೇತ್ರದಿಂದ ಜಿಟಿಡಿ ಮಗನಿಗೆ ಟಿಕೆಟ್ ನೀಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ.


