ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋದಲ್ಲಿದ್ದ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದ ಕೇಸ್ ಗೆ ಸಂಬಂಧಿಸಿದಂತೆ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಕಳೆದ ಎರಡು ವಾರದಿಂದ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದರು. ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ಕೋರ್ಟ್ ನಿರಾಕರಣೆ ಮಾಡಿತ್ತು. ನಿನ್ನೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ.
ಕೋರ್ಟ್ ಜಾಮೀನು ನೀಡಿದರು, ಜೈಲಿನ ಪ್ರಕ್ರಿಯೆ ಮುಗಿಸಿ, ಇಂದು ರೇವಣ್ಣನಿಗೆ ಬಿಡುಗಡೆ ಭಾಗ್ಯಾ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ನಡೆದಿದ್ದಾರೆ. ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ ಎಂದು ತಿಳಿದ ಕೂಡಲೇ ಹೊಳೇನರಸೀಪುರದಲ್ಲಿ ಸಂಭ್ರಮಾಚರಣೆ ಕೂಡ ಮಾಡಲಾಗಿದೆ. ಪಟಾಕಿ ಸಿಡಿಸಿ, ರೇವಣ್ಣ ಅವರನ್ನು ಸ್ವಾಗತಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ.
ಇನ್ನು ಪರಪ್ಪನ ಅಗ್ರಹಾರದ ಮುಂದೆಯೂ ಕಾರ್ಯಕರ್ತರು ಜಮಾಯಿಸಿದ್ದರು. ರೇವಣ್ಣ ಬಿಡುಗಡೆಯಾಗುತ್ತಿದ್ದಂತೆ ಘೋಷಣೆ ಕೂಗಿದರು. ಜನಜಂಗುಳಿ ಜಾಸ್ತಿಯಾದ ಪರಿಣಾಮ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಕಾರ್ಯಕರ್ತರನ್ನು ಸರಿಸಿ, ರೇವಣ್ಣ ಅವರನ್ನು ಕಳುಹಿಸಿದರು.
ಇನ್ನು ಪ್ರಜ್ವಲ್ ರೇವಣ್ಣ ಮಾತ್ರ ಸಾಕಷ್ಟು ಕೇಸ್ ಗಳು ಬಿದ್ದರು ವಿದೇಶದಿಂದ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ. ರೇವಣ್ಣ ಜೈಲಿಂದ ಬಿಡುಗಡೆಯಾಗಿದ್ದಾರೆ. ಇನ್ನಾದರೂ ಪ್ರಜ್ವಲ್ ಬರುತ್ತಾರಾ ನೋಡಬೇಕಿದೆ. ಎಸ್ಐಟಿ ತಂಡ ಕೂಡ ರೇವಣ್ಣನ ವಿಚಾರಣೆಗಾಗಿ ಕಾಯುತ್ತಿದೆ.