ಬೆಂಗಳೂರು: ಸಂಖ್ಯಾಬಲ ಕಡಿಮೆ ಇದ್ದರು ಜೆಡಿಎಸ್ ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರನ್ನು ಗೆಲ್ಲಿಸಿಕೊಂಡು ಬರಲೇಬೇಕೆಂದು ಪಣತೊಟ್ಟಿದೆ. ಅಂಥದ್ರಲ್ಲಿ ಇಂದು ನಡೆದ ಮತದಾನದಲ್ಲಿ ಎಚ್ ಡಿ ರೇವಣ್ಣ ಅವರ ಮತ ಅಸಿಂಧುವಾಗಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ಚುನಾವಣಾ ಆಯೋಗ ಅದಕ್ಕೆ ಒಪ್ಪಿಗೆ ಸೂಚಿಸಿದೆ.
ರೇವಣ್ಣ ಹಾಕಿದ ಮತ ಸಿಂಧು ಎಂದು ಆಯೋಗ ಅಧಿಕೃತವಾಗಿ ಘೋಷಿಸಿದೆ. ಇಂದಿನ ಮತ ಚಲಾವಣೆ ಬಳಿಕ ಯಾರಿಗೆ ಮತ ಹಾಕಿದ್ದೀವಿ ಎಂಬುದನ್ನು ಅವರ ಪಕ್ಷದವರಿಗೆ ಮಾತ್ರ ತೋರಿಸಬೇಕಿತ್ತು. ಆದರೆ ಎಚ್ ಡಿ ರೇವಣ್ಣ ಅವರು ಮತ ಹಾಕಿದ್ದನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ತೋರಿಸಿದ್ದರು.
ಇದಕ್ಕೆ ಅಲ್ಲೆ ಇದ್ದ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಈ ಮತವನ್ನು ಅಸಿಂಧುಗೊಳಿಸಬೇಕೆಂದು ದೂರು ನೀಡಿದ್ದರು. ದೂರಿನ ಬಳಿಕ ಚುನಾವಣಾ ಆಯೋಗ ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲದನ್ನು ಪರಿಶೀಲನೆ ನಡೆಸಿತ್ತು. ಅದರಲ್ಲಿ ರೇವಣ್ಣ ಅವರು ಕೇವಲ ಜೆಡಿಎಸ್ ನವರಿಗೆ ತೋರಿಸಿರುವುದು ಕಂಡು ಬಂದಿದ್ದು, ಮತ ಸಿಂಧು ಎಂದು ಆಯೋಗದ ಅಧಿಕಾರಿ ವಿಶಾಲಾಕ್ಷಿ ಆದೇಶ ಹೊರಡಿಸಿದ್ದಾರೆ.