ಬ್ರಾಹ್ಮಣರು ಧ್ವನಿ ಎತ್ತಿ ಮಾತನಾಡುವುದಿಲ್ಲ.. ಏನು ಮಾತನಾಡಿದ್ರು ನಡೆಯುತ್ತೆ ಅಂತನಾ..? : ಹೆಚ್ಡಿಕೆ ಬಗ್ಗೆ ಪೇಜಾವರ ಶ್ರೀ ಬೇಸರ..!

suddionenews
1 Min Read

ಮಂಡ್ಯ: ಮಾಜಿ ಸಿಎಂ ನೀಡಿದ ಬ್ರಾಹ್ಮಣರ ಹೇಳಿಕೆಗೆ ಪೇಜಾವರ ಶ್ರೀಗಳು ಬೇಸರ ಮಾಡಿಕೊಂಡಿದ್ದಾರೆ. ಬ್ರಾಹ್ಮಣರು ಮುಖ್ಯಮಂತ್ರಿ ಆಗುವುದಾದರೇ ಆಗಲಿ. ಯಾಕೆ ಬ್ರಾಹ್ಮಣರು ಸಿಎಂ ಆಗಬಾರದಾ..? ಅವರು ಭಾರತದ ಪ್ರಜೆಗಳಲ್ಲವಾ. ಬ್ರಾಹ್ಮಣರು ಯಾರು ಕೂಡ ಧ್ವನಿ ಎತ್ತಿ ಮಾತನಾಡುವವರು ಇಲ್ಲ. ಸಂಖ್ಯಾಬಲ ಇಲ್ಲ, ಏನು ಮಾತನಾಡಿದ್ರು ನಡೆಯುತ್ತೆ ಅಂತ ಈ ರೀತಿಯೆಲ್ಲಾ ಮಾತನಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಬ್ರಾಹ್ಮಣರ ಬಗ್ಗೆ ಮಾತನಾಡುವುದು ಇದು ಹೊಸದೇನು ಅಲ್ಲ. ಚುನಾವಣೆ ಬಂದಾಗೆಲ್ಲಾ ಇದು ಹೆಚ್ಚಾಗಿ ಕಾಣಿಸುತ್ತೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಶಾಸಕರು ಎಷ್ಟಿದ್ದಾರೆ..? ಎಷ್ಟು ಮಂದಿಗೆ ಟಿಕೆಟ್ ಕೊಟ್ಟಿದ್ದಾರೆ..? ಮಾತನಾಡುವವರು ಏನು ಬೇಕಾದರೂ ಮಾತನಾಡುತ್ತಾರೆ. ಆದರೆ ಮಾತನಾಡುವಾಗ ಪುರಾವೆಗಳನ್ನಿಟ್ಟುಕೊಂಡು ಮಾತನಾಡಬೇಕು ಎಂದಿದ್ದಾರೆ.

ಪ್ರಹ್ಲಾದ್ ಜೋಶಿಯವರೇ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ. ಪ್ರಹ್ಲಾದ್ ಜೋಶಿಯವರನ್ನು ಸಿಎಂ ಮಾಡಲು ಆರ್ಎಸ್ಎಸ್ ಹುನ್ನಾರ ಮಾಡಿದೆ. ಜೊತೆಗೆ ರಾಜ್ಯದಲ್ಲಿ 8 ಜನ ಡಿಸಿಎಂ ಮಾಡಿ, ಒಬ್ಬ ಸಿಎಂ ಮಾಡುವ ಯೋಜನೆ ಅವರಿಗಿದೆ. ಈಗಾಗಲೇ ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನನಗಿದೆ. ಇವತ್ತು ಪ್ರಹ್ಲಾದ್ ಜೋಶಿ ಅವರನ್ನು ಮುಂದಿನ ಚುನಾವಣೆ ನಂತರ ಈ ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂಬುವುದು ಆರ್ಎಸ್ಎಸ್ನ ಹುನ್ನಾರ ಪ್ರಾರಂಭವಾಗಿದೆ. ಇದಕ್ಕೆ ಕಾರಣ ಪ್ರಹ್ಲಾದ್ ಜೋಶಿ ಅವರು ನಮ್ಮ ದಕ್ಷಿಣ ಭಾರತದ ಬ್ರಾಹ್ಮಣ ಸಂಸ್ಕೃತಿಗೆ ಸೇರಿದವರಲ್ಲ. ಬ್ರಾಹ್ಮಣ ವೃತ್ತಿಯಲ್ಲೂ, ಸಂಸ್ಕಾರದಲ್ಲೂ ಎರಡು ಮೂರು ಭಿನ್ನವಾದ ವಿಧಗಳಿವೆ. ಇವರು ಶೃಂಗೇರಿ ಮಠದ ಒಡೆದ ಪೇಶವರ ಗ್ರೂಪ್ನವರು. ಪೇಶ್ವೆಗಳು ಶೃಂಗೇರಿಯ ಮಠವನ್ನು ಒಡೆದಂತವರು, ಅಲ್ಲಿಯ ದೇವರನ್ನು ಒಡೆದ ವರ್ಗಕ್ಕೆ ಸೇರಿದವರು ಎಂದು ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *