Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೃದಯ ಇದ್ದವರಿಗೆ ಮಾತ್ರ ಬೊಮ್ಮಾಯಿ ಅವರ ಭಾವನಾತ್ಮಕತೆ ಅರ್ಥವಾಗುತ್ತೆ : ಕುಮಾರಸ್ವಾಮಿ

Facebook
Twitter
Telegram
WhatsApp

 

ಬೆಂಗಳೂರು: ಈ ಹಿಂದೆ ಸಿಎಂ ಬೊಮ್ಮಾಯಿ ಅವರು ಭಾವನಾತ್ಮಕವಾಗಿ ಮಾತನಾಡಿದ್ದರು. ನಾನು ಅಳಬಾರದು ಎಂದುಕೊಂಡಿದ್ದೇನೆ ಎಂದು ನುಡಿದಿದ್ದರು. ಇದೀಗ ಆ ಬಗ್ಗೆ ಮಾತನಾಡಿರೋ ಮಾಜಿ ಸಿಎಂ ಕುಮಾರಸ್ವಾಮಿ, ಹೃದಯ ಇದ್ದವರಿಗೆ ಮಾತ್ರ ಅದು ಅರ್ಥವಾಗುತ್ತೆ ಎಂದಿದ್ದಾರೆ.

ಶಿಗ್ಗಾಂವಿಯಲ್ಲಿ ಅವರು ನಾಲ್ಕು ಚುನಾವಣೆಗಳನ್ನು ಸತತವಾಗಿ ಗೆದ್ದಿದ್ದಾರೆ. ಜನ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಭಾವನೆಗಳು ಸಹಜ. ಹೃದಯ ಇದ್ದವರಿಗೆ ಮಾತ್ರ ಅವರ ಭಾವನೆ ಅರ್ಥವಾಗುತ್ತದೆ.  ಆ ಸ್ಥಾನಕ್ಕೆ ಅವರು ಬರಬೇಕಾದರೆ ಆ ಕ್ಷೇತ್ರದ ಜನರೇ ಕಾರಣ. ಹೀಗಾಗಿ ಸಿಎಂ ಅವರು ಭಾವನಾತ್ಮಕವಾಗಿ ಮಾತನಾಡಿರಬಹುದು. ಅದರಲ್ಲಿ ತಪ್ಪೇನಿಲ್ಲ.

ನಾನು ಅನೇಕ ಸಲ ಹೇಳಿದ್ದೇನೆ, ನನಗೆ ರಾಜಕೀಯ ಜನ್ಮ ಕೊಟ್ಟವರು ರಾಮನಗರದ ಜನ ಅಂತ. ಅವರ ಬಗ್ಗೆ ಹೇಳುವಾಗ ನಾನೂ ಭಾವುಕನಾಗಿದ್ದೇನೆ. ಇದು ಮನುಷ್ಯ ಸಹಜ ಗುಣ. ನನ್ನ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಸಿಎಂ ಬದಲಾವಣೆ ಆಗುತ್ತೆ ಅಂತ ಬೊಮ್ಮಾಯಿ ಅವರು ಹೀಗೆ ಮಾತನಾಡಿದ್ದಾರೆ ಎಂಬುದನ್ನ ನಾನು ಒಪ್ಪಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!