Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇಸ್ರೇಲ್‌ʼನಲ್ಲಿಯೇ ನಾನು ಇಲ್ಲವಾಗಬೇಕಿತ್ತು, ನನ್ನ ತಂದೆ-ತಾಯಿ ಪುಣ್ಯದಿಂದ ಬದುಕಿ ಬಂದೆ: ಹೆಚ್ಡಿಕೆ

Facebook
Twitter
Telegram
WhatsApp

ಗುಬ್ಬಿ: ರಾಷ್ಟ್ರೀಯ ಪಕ್ಷಗಳ ಅಬ್ಬರ, ಮುಖಂಡರ ಪಕ್ಷಾಂತರ, ನಂಬಿದ ನಾಯಕರ ವಿಶ್ವಾಸ ದ್ರೋಹದ ನಡುವೆಯೂ ಪ್ರಾದೇಶಿಕ ಪಕ್ಷವನ್ನು ಕಳೆದ 12 ವರ್ಷಗಳಿಂದ ಕಟ್ಟುತ್ತಾ ಬಂದಿದ್ದೇನೆ ಎಂದು ಹೇಳುತ್ತಲೇ ಉಕ್ಕಿಬಂದ ದುಃಖವನ್ನು ತಡೆದುಕೊಂಡು ಬಿಕ್ಕಳಿಸಿದ ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು, ಮಾತಿನ ನಡುವೆಯೇ ತೀವ್ರ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣಿರಿಟ್ಟ ಭಾವುಕರಾದರು.

ದೇವೇಗೌಡರ ಕುಟುಂಬ ಹಣ ಇಟ್ಟುಕೊಂಡು ರಾಜಕೀಯ ಮಾಡಲಿಲ್ಲ. ನಿಮ್ಮಂಥ ಲಕ್ಷಾಂತರ ಕಾರ್ಯಕರ್ತರಿಂದ ರಾಜಕೀಯ ಮಾಡಿ ನಾಡಿನ ಸೇವೆ ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ದೊಡ್ಡ ದೊಡ್ಡ ಶ್ರೀಮಂತರ ಸಂಪರ್ಕವೂ ಇಲ್ಲ. ನಮಗೆ ಇರುವುದು ನಿಮ್ಮಂಥ ಕಾರ್ಯಕರ್ತರ ಸಂಬಂಧ ಮಾತ್ರ, ಒಂದೊಂದು ಚುನಾವಣೆ ನಡೆಸಬೇಕಾದರೂ ಎಷ್ಟೆಷ್ಟು ಕಷ್ಟಪಟ್ಟಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತು. ನಾವೇನಿದ್ದರೂ ನಿಮ್ಮಿಂದ ಬೆಳೆದವರು ಎಂದರು.

ಎರಡನೇ ಸಲ ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ನಾನು ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ʼಗೆ ಭೇಟಿ ನೀಡಿದ್ದೆ. ಅಲ್ಲಿಯೇ ನನ್ನ ಪ್ರಾಣ ಹೋಗಬೇಕಾಗಿತ್ತು. ನನ್ನ ತಂದೆ-ತಾಯಿ ಮಾಡಿದ ಪುಣ್ಯದಿಂದ ನಾನು ಬದುಕುಳಿದು ವಾಪಸ್ ಬಂದೆ. ಎರಡನೇ ಸಲ ಹೃದಯದ ಆಪರೇಷನ್ ಆದಾಗ ಒಂದೇ ತಿಂಗಳಲ್ಲಿ ಪಕ್ಷ ಕಟ್ಟಬೇಕೆಂದು ರಾಜ್ಯಾದ್ಯಾಂತ ಪ್ರವಾಸಕ್ಕೆ ಹೊರಟುಬಿಟ್ಟೆ. ಯಾರು ಕೂಡ ನನ್ನ ಹಿಂದೆ ಬಂದು ರಾಜ್ಯಾದ್ಯಂತ ಸುತ್ತಲಿಲ್ಲ. ದೇವೇಗೌಡರು ಈ ವಯಸ್ಸಿನಲ್ಲೂ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಇಷ್ಟೆಲ್ಲ ಕಷ್ಟಪಟ್ಟು ನಾವು ಪಕ್ಷದ ಕೆಲಸ ಮಾಡುತ್ತಿದ್ದರೂ ಇನ್ನೂ ನಮಗೆ ಸಿಗುತ್ತಿರುವುದು 40 ಸ್ಥಾನಗಳಷ್ಟೇ. ಇದರಲ್ಲಿ ಪಕ್ಷವನ್ನು ಏಣಿಯಂತೆ ಬಳಸಿಕೊಂಡು ಒದ್ದು ಹೋದವರ ಪ್ರಮೇಯವೂ ಇದೆ. ಪಕ್ಷಕ್ಕೆ ಬರುವ ತನಕ ಜನರ ಸೇವೆ ಎನ್ನುವವರು ನಂತರ ಹಣದ ಹಿಂದೆ ಬೀಳುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಎಲ್ಲ ಸತ್ಯಾಂಶಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ತೀರ್ಮಾನ ನಿಮ್ಮದು ಎನ್ನುತ್ತಲೇ ಗುಬ್ಬಿಯ ರಾಜಕೀಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಹೆಚ್‌ಡಿಕೆ ಅವರು; ವೀರಣ್ಣ ಗೌಡರು 1999ರಲ್ಲಿ ಪಕ್ಷದಿಂದ ಶಾಸಕರಾದರು. ಆಗ ಪಕ್ಷದಿಂದ ಗೆದಿದ್ದ ಹತ್ತು ಶಾಸಕರಲ್ಲಿ ಆರು ಜನ ಕಾಂಗ್ರೆಸ್ ಸೇರಿಬಿಟ್ಟರು. ಹಾಗೆಯೇ ವೀರಣ್ಣಗೌಡರೂ ಕಾಂಗ್ರೆಸ್‌ ಕಡೆ ಹೋದರು. 2004ರ ಚುನಾವಣೆಯಲ್ಲಿ ಚೆನ್ನಿಗಪ್ಪನವರು ದೇವೇಗೌಡರ ಮನೆಗೆ ಶಿವನಂಜಪ್ಪ ಅವರನ್ನು ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಮುಂದಿನ ಚುನಾವಣೆಗೆ ಅವರಿಗೇ ಟಿಕೆಟ್ ಅಂತ ಗೌಡರು ಮಾತೂ ಕೊಟ್ಟಿದ್ದರು.

ಆಗಿನ್ನೂ ನಾನು ರಾಜಕೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಜವಾಬ್ದಾರಿ ಸ್ಥಾನದಲ್ಲಿ ಇರಲಿಲ್ಲ. ಅದೇ ಸಮಯದಲ್ಲಿ ಇವತ್ತಿನ ಗುಬ್ಬಿ ಶಾಸಕರಾದ ಶ್ರೀನಿವಾಸ್ ನನ್ನ ಸಂಪರ್ಕಕ್ಕೆ ಬಂದರು. ಆಗ ಅವರು ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ನಾನು ದೇವೇಗೌಡರ ಅಭಿಮಾನಿ, ಅವರ ಹೋರಾಟಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದರು, ನಾನೂ ನಂಬಿದೆ.

2004ರಲ್ಲಿ ಗುಬ್ಬಿಯಿಂದ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದು ಅವರ ಇಚ್ಚೆಯಾಗಿತ್ತು. ಆದರೆ ಗೌಡರು ಶಿವನಂಜಪ್ಪ ಅವರಿಗೆ ಮಾತು ಕೊಟ್ಟಿದ್ದರು. ಆ ಮಾತನ್ನೂ ತಂದೆಯವರು ಶ್ರೀನಿವಾಸ್‌ ಅವರಿಗೇ ನೇರವಾಗಿ ಹೇಳಿದರು. ಈ ಸಲ ಶಿವನಂಜಪ್ಪ ಅವರಿಗೆ ಕೊಟ್ಟ ಮಾತು ತಪ್ಪಲಾರೆ, ಇನ್ನೊಮ್ಮೆ ಟಿಕೆಟ್‌ ಕೊಡುವೆ, ದಯವಿಟ್ಟು ಕ್ಷಮಿಸಪ್ಪ ಎಂದಿದ್ದರು.

ಆಗ ನನ್ನ ಮನೆಗೆ ಬಂದು ಮತ್ತೆ ಟಿಕೆಟ್‌ ಕೇಳಿದಾಗ ನಾನು ಗೌಡರು ಹೇಳಿದ್ದನ್ನೇ ಶ್ರೀನಿವಾಸ್‌ ಅವರಿಗೆ ಹೇಳಿದೆ. ಆಗ ಅವರಿಗೆ ನಾನೊಂದು ಮಾತು ಹೇಳಿದೆ. ನಿಮಗೆ ಜನರ ಒಲವು ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿ, ಜನರ ಆಶೀರ್ವಾದ ಇದ್ದರೆ ಗೆಲ್ಲುತ್ತೀರಿ ಎಂದೆ. ಈಗ ಅವರ ತಂದೆಯವರೂ ಇದ್ದಾರೆ, ಅವರು ಇದ್ದಾರೆ. ಇದನ್ನು ಬಿಟ್ಟರೆ ನನ್ನಿಂದ ಬೇರೆ ಯಾವ ಲೋಪವೂ ಅಗಿಲ್ಲ.

ಆಗ ನಮ್ಮ ಪಕ್ಷದಲ್ಲಿ ಎಂಪಿ ಪ್ರಕಾಶ್‌, ಪಿಜಿಆರ್‌ ಸಿಂಧ್ಯಾ, ಸಿದ್ದರಾಮಯ್ಯ ಸೇರಿ ಹಲವಾರು ನಾಯಕರು ಇದ್ದರು. ನಂತರ ಪಕ್ಷೇತರವಾಗಿ ಸ್ಪರ್ಧಿಸಿದ ಶ್ರೀನಿವಾಸ್ ಜನರ ಆಶೀರ್ವಾದದಿಂದ ಗೆದ್ದರು. ಆಗ ಸಮ್ಮಿಶ್ರ ಸರಕಾರ ಇತ್ತು. ಶ್ರೀನಿವಾಸ್‌ ನಮ್ಮ ಜತೆ ಚೆನ್ನಾಗಿದ್ದರು. ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಆಗ ನಾನೂ ಅವರಂತೆ ಒಬ್ಬ ಶಾಸಕನಾಗಿದ್ದೆ. ಆದರೆ ನನ್ನ ಜತೆ ಉತ್ತಮ ಒಡನಾಟ ಇತ್ತು. ಅಣ್ಣತಮ್ಮಂದಿರಂತೆ ಇದ್ದೆವು. ಸಂಶಯವೇ ಇಲ್ಲ. ಬಿಜೆಪಿ ಜತೆ ಸರಕಾರ ಮಾಡಬೇಕಾದಾಗ ನನ್ನ ಜತೆಗೇ ನಿಂತರು. ಆಗ ಅವರು ನನಗೆ ಕಾದು ಕೆಲಸ ಮಾಡಿಸಿಕೊಳ್ಳಬೇಕಾಗಿರಲಿಲ್ಲ. ಅವರ ಎಲ್ಲ ಕೆಲಸಗಳು ಸುಲಭವಾಗಿ ಆಗುತ್ತಿದ್ದವು ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

error: Content is protected !!