ಬಾಗಲಕೋಟೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಕೆಲವು ಕಡೆಯಲ್ಲೆಲ್ಲಾ ಅವರನ್ನು ಕರೆಯುತ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದು, ಅವರು ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದವರು. ಹಲವಾರು ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದೀನಿ ಎಂಬ ಭಾವನೆ ಇಟ್ಟುಕೊಂಡಿದ್ದಾರೆ. ಕಾರ್ಯಕರ್ತರು ಕರೆಯುತ್ತಾರೆ ಎಂದಿದ್ದಾರೆ.
ಇನ್ನು ಯತ್ನಾಳ್ ಅವರ ಸಿಎಂ ಪೋಸ್ಟ್ ಗೆ 2500 ಕೋಟಿ ಹಣದ ಬಗ್ಗೆ ಮಾತನಾಡಿ, ಈ ವಿಷಯದಲ್ಲಿ ಒಬ್ಬ ಜವಬ್ದಾರಿಯುತ ಶಾಸಕರು. ಈ ಹಿಂದೆ ಕೇಂದ್ರದಲ್ಲಿ ವಾಜಪೇಯಿ ಅವರ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದವರು. ಅವರು ಈ ಒಂದು ಆಪಾದನೆ ಮಾಡಿದ್ದಾರೆ. ಬಿಜೆಪಿಯ ಕೇಂದ್ರದಲ್ಲಿರುವ ಕೆಲವು ದಲ್ಲಾಳಿಗಳು, ಈ ರೀತಿಯ ಹಣದ ವ್ಯವಹಾರದ ಮೂಲಕ ಅಧಿಕಾರವನ್ನು ಕೊಡುತ್ತಾರೆ ಎಂದು.
ಈ ಸರ್ಕಾರ ಬಂದಿದ್ದು ಇನ್ನೇಗೆ..? ರಚನೆ ಮಾಡಿದ್ದು ಹೇಗೆ..? ಪಾಪದ ಹಣದ ಮೂಲಕ ಕೆಲವು ಎಂಎಲ್ಎಗಳನ್ನು ತೆಗೆದುಕೊಂಡು ಹೋಗಿ ಅಧಿಕಾರ ಮಾಡಿದ್ದಾರೆ. ಅತ್ಯಂತ ಪರಿಶುದ್ಧವಾದಂತ, ಪಾರದರ್ಶಕವಾದ ಸರ್ಕಾರವ ಇದೇನು..? ಇವ್ರನ್ನು ಜನ ಏನಾದರೂ ಆಯ್ಕೆ ಮಾಡಿಬಿಟ್ಟಿದ್ದರಾ..?. ಅದರಿಂದ ಇಲ್ಲಿ ಪ್ರಶ್ನೆ 2500 ಕೋಟಿ ಏನಿದೆ.. ಇವರಿಗೆ ದುಡ್ಡಲ್ಲ ಮುಖ್ಯ. ಬಿಜೆಪಿ ಸರ್ಕಾರ ನಡೆಯುತ್ತಿರುವುದೇ ನಾಡಿನ ಜನತೆಯ ಸಂಪತ್ತು ಏನಿದೆ ಖಜಾನೆ. ಖಜಾನೆ ಲೂಟಿ ಮಾಡಿ ಅದನ್ನು ಡೆಲ್ಲಿಗೆ ಕಳುಹಿಸಲೆ ಇರುವುದು.
ನಾನು ಪ್ರಧಾನಮಂತ್ರಿಗಳ ಮೇಲೆ ಚರ್ಚೆ ಮಾಡಲ್ಲ. ಆದರೆ ಅವರನ್ನು ಬಿಟ್ಟು ಇಲ್ಲಿ ಕೆಲವರು ಪಕ್ಷದ ಮುಖಂಡರಿದ್ದಾರಲ್ಲ, ಚುನಾವಣಾ ತಂತ್ರಗಾರಿಕೆ ನಡೆಸುವವರಿದ್ದಾರಲ್ಲ. ಅವರ ಜೊತೆ ಇರುವವರಿದ್ದಾರಲ್ಲ ಕೆಲವರು. ಬಿಜೆಪಿ ಎಂಬುದು ನನ್ನ ಪ್ರಕಾರ ಭ್ರಷ್ಟ ಜನರ ಸರ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ.