ಬೆಂಗಳೂರು: ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಲು ಸಿದ್ಧವಾಗಿರುವುದನ್ನು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪಾದಯಾತ್ರೆ ಮೂಲಕ ಕಾವೇರಿ ಭಾಗದ ಜನರ ಜೀವನ ಹಾಳು ಮಾಡಲು ಹೊರಟಿದ್ದಾರೆ ಎಂದಿದ್ದಾರೆ.
ಜೆಪಿ ಭವನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ಡಿಪಿಆರ್ ಆಗಿಯೇ ಇಲ್ಲ. ಡಿಪಿಆರ್ ಆಗಿದ್ದು ನನ್ನ ಅವಧಿಯಲ್ಲಿ. ಇಷ್ಟು ದಿನ ಇಲ್ಲದವರಿಗೆ ಬೆಂಗಳೂರು ಭಾಗದವರಿಗೆ ಈಗ ನೀರು ಕೊಡಿಸಲು ನೆನಪಾಗಿದೆಯಾ..? ಪಾದಯಾತ್ರೆ ಮೂಲಕ ಕಾವೇರಿ ಭಾಗದ ಜನರ ಜೀವನ ಹಾಳು ಮಾಡಲು ಹೊರಟಿದ್ದಾರೆ. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದಿದ್ದಾರೆ.
ಎರಡು ರಾಜಕೀಯ ಪಕ್ಷಗಳು ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿವೆ. ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡುತ್ತಿದೆ. ಇದರಿಂದ ನಮಗೇನು ತೊಂದರೆಯಿಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಅಂತ ಹೋಗಿದ್ದರು. ಆಗ ಏನಾಯಿತು. ನೀವೂ ಎಸಿಯಲ್ಲಿ ಆರಾಮಾಗಿ ಇರ್ತೀರಾ. ಬಡವರನ್ನ ನೋಡುವವರು ಯಾರು.
ಜೆಡಿಎಸ್ ಗೆ 5 ವರ್ಷ ಅಧಿಕಾರ ನೀಡಿ. ಪಾದಯಾತ್ರೆ ಮೂಲಕ ಸ್ಟಂಟ್ ಮಾಡಲ್ಲ. ನಿಗದಿತ ಸಮಯಕ್ಕೆ ಯೋಜನೆಗಳನ್ನ ಮುಗಿಸುತ್ತೇವೆ ಎಂದು ಎರಡು ಪಕ್ಷಕ್ಕೂ ತಿರುಗೇಟು ನೀಡಿದ್ದಾರೆ.