ಅಯ್ಯಪ್ಪ ಸ್ವಾಮಿ ಬಳಿ ಕುಮಾರಣ್ಣ ಸಿಎಂ ಆಗಲಿ ಎಂದು ಬೇಡಿಕೊಂಡ ಭಕ್ತರು..!

suddionenews
1 Min Read

ರಾಮನಗರ: 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತನ್ನಿ ಎಂದು ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಹಲವು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಇದೀಗ ಕುಮಾರಸ್ವಾಮಿ ಅವರೇ ಸಿಎಂ ಆಗಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಅದರ ಭಾಗವಾಗಿ ಅಯ್ಯಪ್ಪ ಸ್ವಾಮಿಗೆ ಹೊರಟಾಗಲೂ ಕುಮಾರಸ್ವಾಮಿ ಅವರ ಫೋಟೋ ಹಿಡಿದು ಹೊರಟಿದ್ದಾರೆ.

ಕನಕಪುರದ ಜೆಡಿಎಸ್ ಕಾರ್ಯಕರ್ತ ಸುನಿಲ್ ಕುಮಾರ್ ನೇತೃತ್ವದಲ್ಲಿ ಶಬರಿಮಲೆಗೆ ಪಾದಾಯಾತ್ರೆ ಹೊರಡಲಾಗಿದೆ. ಈ ವೇಳೆ ಮಾಲಾಧಾರಿಗಳು ಕುಮಾರಸ್ವಾಮಿ ಅವರ ಫೋಟೋ ಹಿಡಿದು ಹೊರಟಿದ್ದಾರೆ. ನಾಡಿಗೆ ಒಳ್ಳೆಯದು ಆಗಬೇಕೆಂದರೆ ಕುಮಾರಸ್ವಾಮಿ ಅವರು ಸಿಎಂ ಆಗಲೇಬೇಕು. 2023ಕ್ಕೆ ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎಂದಿದ್ದಾರೆ.

ಅಯ್ಯಪ್ಪ ಮಾಲಾಧಾರಿಗಳಾದ ಅನಿಲ್, ರವಿಕುಮಾರ್, ಮನು ಸೇರಿದಂತೆ ಹಲವರು ಕುಮಾರಸ್ವಾಮಿ ಅವರ ಭಾವಚಿತ್ರ ಹಿಡಿದು ಹೊರಟಿದ್ದಾರೆ. ಮುಂದಿನ ಸಿಎಂ ಕುಮಾರಸ್ವಾಮಿ ಅವರೇ ಆಗಬೇಕೆಂದು ಹರಕೆ ಕೂಡ ಕಟ್ಟಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *