ರಾಮನಗರ: ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಫಲಿತಾಂಶ ಮುಗಿದಿದ್ದು, ಎರೆಉ ಕ್ಷೇತ್ರದಲ್ಲೂ ಜೆಡಿಎಸ್ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಕುಮಾರಸ್ವಾಮಿ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.
ಸಿಂದಗಿಯಲ್ಲಿ ಹಳ್ಳಿ ಹಳ್ಳಿಗಳನ್ನ ನೋಡಿಕೊಂಡು ಬಂದಿದ್ದೇನೆ. ಅಲ್ಲಿನ ಜನ ಹೇಗೆ ಬದುಕುತ್ತಿದ್ದಾರೆ ಎಂಬುದು ತಿಳಿದಿದೆ. ಅದನ್ನ ನಾನು ನೋಡಿದ್ದೇನೆ. ನನ್ನ ಸ್ವಂತ ಖರ್ಚಿನಲ್ಲೇ ಬಸ್ ಮಾಡಿಕೊಡ್ತೇನೆ. ನೀವೂ ಒಮ್ಮೆ ಅಲ್ಲಿಗೆ ಹೋಗಿ ಬನ್ನಿ ಎಂದು ತನ್ನನ್ನು ಟೀಕಿಸುವವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ನಾನು 3 ವರ್ಷ ಶಾಸಕನಾಗಿದ್ದೆ. ಸಿಎಂ ಆಗಿ 14 ತಿಂಗಳಿದ್ದೆ. ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ನೋಡಿ ಹಾಗೇ ಕಳೆದ 20 ವರ್ಷದಲ್ಲಿ ಆಗಿರುವ ಅಭಿವೃದ್ಧಿಯನ್ನು ನೋಡಿ. ನನ್ನ ಅಭಿವೃದ್ಧಿ ಬಗ್ಗೆ ಟೀಕೆ ಮಾಡುವವರಿಗಾಗಿ ಇದನ್ನ ಹೇಳ್ತಾ ಇದ್ದೇನೆ. ನನ್ನ ಬಗ್ಗೆ ಸುಖಾ ಸುಮ್ಮನೆ ಆರೋಪ ಮಾಡಿದ್ರೆ ಅದಕ್ಕೆಲ್ಲಾ ಸೊಪ್ಪು ಹಾಕಲ್ಲ. ಕಳೆದ ಅವಧಿಯಲ್ಲಿ ಯಾವ ಅಭಿವೃದ್ಧಿ ಕೆಲಸವೇ ನಡೆದರೂ ಅದಕ್ಕೆ ಶಾಸಕರಿಗೂ ಪೇಮೆಂಟ್ ಹೋಗಬೇಕಿತ್ತು. ಇಲ್ಲವಾದರೆ ಅವರು ಗುದ್ದಲಿ ಪೂಜೆಗೆ ಬರ್ತಾನೆ ಇರ್ಲಿಲ್ಲ.
ಈ ಬಗ್ಗೆ ನಾನು ಓಪನ್ ಆಗಿ ಹೇಳ್ತೇನೆ. ಬೇಕಾದ್ರೆ ಕೆಲವೊಬ್ಬರು ಗುತ್ತಿಗೆದಾರರನ್ನ ಕೇಳಿ ನೋಡಿ.ಜನರಿಗೆ ಗುಣಾತ್ಮಕ ಕೆಲಸ ಮಾಡಬೇಕು. ಇದು ನನ್ನ ನೇಚರ್. ನಾವೂ ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಕ್ಕೇನೆ ಜನ ಬದುಕುವುದಕ್ಕೆ ಆಗ್ತಿರೋದು ಎಂದು ಸಿ ಪಿ ಯೋಗೀಶ್ವರ್ ಹೆಸರೇಳದೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.