ಕುಮಾರಸ್ವಾಮಿಗೆ ತಲೆ ಕೆಟ್ಟಿದ್ಯಾ ಎನ್ನಬಹುದು : ಹೆಚ್ಡಿಕೆ ಹೀಗಂದಿದ್ಯಾಕೆ..?

suddionenews
1 Min Read

ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಬರುವವರ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡಿದ್ದು, ಸಣ್ಣ ಪುಟ್ಟ ದೋಷಗಳಿಂದ ಪಕ್ಷದಿಂದ ನಿರ್ಗಮಿಸಲು ಬಯಸಿದ್ದರೋ, ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಮಾಡದೆ ಇರುವಂತವರು, ಪಕ್ಷಕ್ಕೆ ನಿಷ್ಠೆಯಿಂದ ಇರುವವರನ್ನು ಒಳಗೊಂಡಂತೆ, ಹೊಸ ಮುಖಗಳಿಗೂ ಹೆಚ್ಚಿನ ಆದ್ಯತೆ ಕೊಡಬೇಕೆಂಬುದು ನನ್ನ ಉದ್ದೇಶ ಏನಿದೆ, ನನ್ನ ಗುರಿ ಇರುವುದು ಯಾವ ಪಕ್ಷದ ಹಂಗಿಲ್ಲದೆ, ಜನತೆಯ ಸಂಪೂರ್ಣ ಆಶಯದೊಂದಿಗೆ ಬರ ಮಾಡಿಕೊಳ್ಳುತ್ತೇವೆ.

ಬಹಳ ಜನಕ್ಕೆ ಕುಮಾರಸ್ವಾಮಿ ಅವರಿಗೆ ತಲೆ ಕೆಟ್ಟಿದೆಯಾ ಅಂತ ಸಾಕಷ್ಟು ಜನ ಎನ್ನಬಹುದು. ಈಗ ಮೂರ್ನಾಲ್ಕು ತಿಂಗಳ ಹಿಂದೆ ಜೆಡಿಎಸ್ ಮುಗಿದೇ ಹೋಯ್ತು ಅಂತಿದ್ದರು. ಹತ್ತು ಸೀಟು ಬರಲ್ಲ ಅಂತಿದ್ದರು. ರಾಜ್ಯದಲ್ಲಿ ಏನೋ ಡೆವಲಪ್ಮೆಂಟ್ ಶುರುವಾಗಿದೆ. ಇವತ್ತು ನನ್ನ ನಿಲುವಿನ ಬಗ್ಗೆ ನಾಡಿನ ಎಲ್ಲಾ ಸಮಾಜಗಳು ಇವತ್ತು ಮೆಚ್ಚಿಕೊಂಡಿದ್ದಾರೆ ಎಂದಿದ್ದಾರೆ.

ಐದು ವರ್ಷ ಕೊಟ್ಟರೆ ನಿರಾವರಿ ಯೋಜನೆ ಪೂರ್ಣಗೊಳಿಸುವ ಬಗ್ಗೆ ಆಶ್ವಾಸನೆ ನೀಡಿದ ಬಗ್ಗೆ ಮಾತನಾಡಿ, ಸರ್ಕಾರ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಿಲ್ಲ. ಉದಾಹರಣೆಗೆ 25 ಸಾವಿರ ಕೋಟಿಯನ್ನ 16 ತಿಂಗಳಿಗೆ ಹೊಂದಿಸಿದ್ದೆ. ಅದೇ ನಿಮಗೆ ಉದಾಹರಣೆ. ಇವತ್ತು ನಮಗೂ ಗೊತ್ತಿದೆ. ಮಹದಾಯಿ ಇರಲಿ, ಮೇಕದಾಟಿರಲಿ ಸಣ್ಣ ಪುಟ್ಟ ಕಾಲುವೆಗಳ ಆಧುನೀಕರಣ ಮಾಡಯವುದಿರಲಿ ಎಲ್ಲವನ್ನು ಪಟ್ಟಿ ಮಾಡುತ್ತಾ ಹೋದರೆ, ಇವತ್ತು ಹಲವಾರು ನದಿಯ ಮೂಲವನ್ನು ಬಳಕೆ ಮಾಡಿಕೊಂಡು ಹೋಗಬಹುದು.

ಕನಿಷ್ಠ ನಾಲ್ಕರಿಂದ ಐದು ಲಕ್ಷ ಕೋಟಿ ಹಣ ಬೇಕು. ಅದಕ್ಕೋಸ್ಕರವೇ ಜನತೆಗೆ ಮನವಿ ಮಾಡುತ್ತಿರುವುದು. ಐದು ವರ್ಷದ ಸರ್ಕಾರವನ್ನು ಜೆಡಿಎಸ್ ಪಕ್ಷಕ್ಕೆ ನೀಡಿ. ಐದು ವರ್ಷದಲ್ಲಿ ನಾನು ಹೇಳಿದ ಯೋಜನೆಗಳನ್ನು ಸಂಪೂರ್ಣಗೊಳಿಸದೆ ಇದ್ದರೆ, ಸ್ವತಂತ್ರವಾದಂತ ಅಧಿಕಾರವನ್ನು ಕೊಟ್ಟರೆ, ಜನತೆ ಕೈನಲ್ಲೇ ಇರುವುದು ಇದು. ನಂಗೊಂದು ಸವಾಲಿದು. ನಾಡಿನ ಬದುಕು, ಮಕ್ಕಳ ಭವಿಷ್ಯ ಮುಂದಿನ ಪೀಳಿಗೆಯದ್ದು. ಒಂದು ಅವಕಾಶವನ್ನು ಕೊಡಿ. ಪೂರೈಸದೆ ಹೋದರೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *