ಹಾಸನ: ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಅಲ್ಲ ನಿಮ್ಮ ಅಪ್ಪನ ಮೇಲೆ ಆಣೆ ಮಾಡಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಮೊದಲು ಸುಳ್ಳಿನ ರಾಮಯ್ಯನಿಗೆ ಹೇಳ್ತೀನಿ, ನಿನ್ನೆ ಮೊನ್ನೆ ನಾಲ್ಕು ಪ್ರಶ್ನೆ ಕೇಳಿದ್ದೀನಲ್ಲ ಅದಕ್ಕೆ ಉತ್ತರ ಕೊಡೋಕೆ ಹೇಳಿ. ಟ್ವೀಟ್ ನೋಡಿದೆ, ಏನೋ ಕೋಮುವಾದ, ಜಾತ್ಯಾತೀತವಾದದ ಕಾಲಘಟ್ಟವನ್ನು ಸರಿಪಡಿಸಲು ನಿಂತವರಂತಲ್ಲ, ಇಡೀ ದೇಶದ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿಯಾಗಿದೆ. ಕರ್ನಾಟಕ ಒಂದರಲ್ಲಿ ಇನ್ನು ಜೀವ ಆಡುತ್ತಾ ಇದೆ. ಇವರ್ಯಾವ ಕೋಮುವಾದ, ಜಾತ್ಯಾವಾದ ನಿಲ್ಲಿಸುತ್ತಾರೆ. ಕಾಂಗ್ರೆಸ್ ನಾಯಕರೆ ನಿನ್ನೆ ಹುಬ್ಬಳ್ಳಿಯಲ್ಲಿ ಸ್ಟೇಷನ್ ಹತ್ರ ಹೋಗಿ ಗಲಾಡೆ ಮಾಡಿದ್ರು ಅಂತ ಸುದ್ದಿಯಾಗಿದೆ. ಇದೆಲ್ಲಾ ಇಟ್ಟುಕೊಂಡು ಈ ದೇಶದಲ್ಲಿ ಜಾತ್ಯಾತೀತ ಉಳಿಸುತ್ತಾರಾ.
ದೇವೇಗೌಡರ ಮೇಲೆ ಆಣೆ ಮಾಡು ಅಂತ ಕೇಳುವುದಕ್ಕೆ ಯಾವೂರ ದಾಸಯ್ಯ ಅಂತ ಕೇಳ್ತೀನಿ. ಎಚ್ಚರಿಕೆಯಿಂದ ಮಾತನಾಡಲಿ. ಪದೇ ಪದೇ ಬಿಜೆಪಿ ಬಿಟೀಂ ಬಿಟೀಂ ಅಂತ ಹೇಳಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೆ ಮೂಲಕಾರಣ ಇವರೇ. 150 ಸೀಟು ಗೆಲ್ಲುತ್ತೀವಿ ಅಂತ ಭಾಷಣ ಮಾಡಿಕೊಂಡು ಹೋಗುತ್ತಿದ್ದೀರಲ್ಲ. ನಿಮ್ಮ ಯೋಗ್ಯತೆ 50-60ಕ್ಕೋ ಬರ್ತೀರಿ. ಮುಂದಿನ ಚುನಾವಣೆಯಲ್ಲಿ ಜನ ತಿರಸ್ಕಾರ ಮಾಡ್ತಾರೆ, ಮೆಜಾರಿಟಿ ಬರಲ್ಲ. ಕುಮಾರಸ್ವಾಮಿ ಜೆಡಿಎಸ್ ಪಕ್ಷ ನಮಗೆ ಬೆಂಬಲ ಕೊಡಬೇಕು ಅಂತ ತಾನೇ ಕೇಳುತ್ತಾ ಇರೋದು. ಅದನ್ನು ಕೇಳಿ. ಒಂದು ಪ್ರಶ್ನೆಯನ್ನು ಅವರಿಗೆ ಕೇಳಿ. ಯಾತಕ್ಕೆ ನನಗೆ ಈ ಪ್ರಶ್ನೆಯನ್ನು ಕೇಳುತ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಯಾವನ್ ರೀ ವಚನ ಭ್ರಷ್ಟ ಆಗಿದ್ದು. ಯಾವುದೋ ಒಂದು ಅಗ್ರಿಮೆಂಟ್ ತಗೊಂಡು ಬಂದು ಸಹಿ ಮಾಡಿಸಿ, ವಚನ ಭ್ರಷ್ಟರಾಗಿದ್ದು ಬಿಜೆಪಿಗರು. ನಾನ್ಯಾಕೆ ವಚನ ಭ್ರಷ್ಟನಾಗಲಿ. 9 ದಿನ ಮುಖ್ಯಮಂತ್ರಿಯಾಗಿರಲಿಲ್ಲ. ಪದೇ ಪದೇ ಆ ಮಾತು ಹೇಳುವ ಅಗತ್ಯವಿಲ್ಲ. ತಿಂದ ಮನೆಗೆ ದೋಖಾ ಹಾಕಿ ಹೋದಂತ ವ್ಯಕ್ತಿ ನನ್ನ ಬಗ್ಗೆ ಮಾತಾಡ್ತಾರಾ. ವಚನ ಭ್ರಷ್ಟತೆ ಬಗ್ಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.