ರಾಮನಗರ: ಮಹಾರಾಷ್ಟ್ರದಲ್ಲಿ ಸರ್ಕಾರ ತೆಗೆಯಲು ಬಿಜೆಪಿ ಹೊರಟಿದೆ. ನಮಗೆ ಏನು ಗೊತ್ತಿಲ್ಲ ಎಂಬಂತೆ ಬಿಜೆಪಿಯವ್ರು ಇದ್ದಾರೆ. ಆದರೆ ಇಡೀ ದೇಶಕ್ಕೆ ಇದು ಬಿಜೆಪಿಯ ಆಟವೆಂದು ಗೊತ್ತು ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಎಂಎಲ್ಎಗಳನ್ನ ಕರೆದೊಯ್ದಿದ್ದಾರೆ. ಶಾಸಕರನ್ನ ಹೈಜಾಕ್ ಮಾಡಿಕೊಂಡು ಅಲ್ಲಿಟ್ಟುಕೊಂಡಿದ್ದಾರೆ. ಕರ್ನಾಟಕದ ಸರ್ಕಾರ ನಡೆಯುತ್ತಿದ್ದಾಗ ಮುಂಬೈಗೆ ಕರೆದೊಯ್ದಿದ್ದರು. ಕರ್ನಾಟಕದ ನೆನಪು ಮತ್ತೇನು ಕಾಣುತ್ತಿದೆ. ಶಾಸಕರ ಹೋಗಬೇಕಾದರೆ ಯಾವ ಆಮಿಷಗಳು ಇರುತ್ತದೆ.
ಈ ವಿಷಯ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಕಾರಣಗಳು ಬೇರೆ ಬೇರೆ ಕೊಡುತ್ತಾರೆ. ಚುನಾಯಿತ ಸರ್ಕಾರ ಅಸ್ಥಿರಗೊಳಿಸುವಂತದ್ದು ಮಾರಕ. ಇದು ವ್ಯವಸ್ಥೆಗೆ ಮಾರಕವಾದ ನಡೆ. ಯಾರ ಸರ್ಕಾರ ಇರಬಾರದೆಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಒಳಗೊಂಡಂತೆ ಎಲ್ಲಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು.ಅವರ ಈ ರೀತಿಯ ಕುತಂತ್ರದ ಬೆಳವಣಿಗೆಗಳು ಏನಿದೆ. ಮುಂದಿನ ದಿನಗಳಲ್ಲಿ ಅವರಿಗೆ ಬೂಮ್ ರಂಗ್ ಆಗಲಿದೆ. ಮಹಾರಾಷ್ಟ್ರ ಬೆಳವಣಿಗೆಗಳ ಬಗ್ಗೆ ಮಾಜಿ ಸಿಎಂ ಹೆಚ್‌ಡಿಕೆ ಕಿಡಿಕಾರಿದ್ದಾರೆ.
ಶಿವಸೇನೆಯ ನಾಯಕ ಏಕನಾಥ್ ಶಿವಸಿಂಧೆ ಏನೇ ಹೇಳಲಿ. ಏಕನಾಥ್ ಶಿಂಧೆ ಶಿವಸೇನೆ ನಮ್ಮದೆಂದು ಕ್ಲೈಮ್ ಮಾಡಬಹುದು. ಸಂಖ್ಯಾಬಲದ ಆಧಾರದ ಮೇಲೆ ಅವರು ಕ್ಲೈಮ್ ಮಾಡಬಹುದು. ಚುನಾವಣೆಗೆ ಹೋದಾಗ ಡೆವಲಪ್ಮೆಂಟ್ ನಡೆಯುತ್ತದೆ ಅವತ್ತು ಚರ್ಚೆ ಆಗುತ್ತದೆ. ಶಿವಸೇನೆಯ ಸಂಸ್ಥಾಪಕರು ಮತ್ತು ಯಾರ್ಯಾರು ದೇಣಿಗೆ ನೀಡಿದ್ದಾರೆ. ಕಾರ್ಯಕರ್ತರು ಯಾರ ಜೊತೆಗೆ ನಿಲ್ಲುತ್ತಾರೆ. ಇವೆಲ್ಲದರ ಮೇಲೆ ಮುಂದಿನ ಬೆಳವಣಿಗೆ ತೀರ್ಮಾನವಾಗುತ್ತದೆಂಬುದು ನನ್ನ ಅಭಿಪ್ರಾಯ ಎಂದು ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಹೇಳಿಕೆ ನೀಡಿದ್ದಾರೆ.