ರಾಮನಗರ: ಜಿಲ್ಲೆಯಲ್ಲಿ ಸಿಎಂ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘಟನೆಗಳನ್ನ ನೋಡ್ತಾ ಇದ್ರೆ ಜನಪ್ರತಿನಿಧಿಗಳಿಂದ ಜನರು ಹುಷಾರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
ಜನಪ್ರತಿನಿಧಿಗಳ ಈ ರೀತಿಯ ನಡವಳಿಕೆ ಜನರಿಗೆ ಭಯ ಹುಟ್ಟಿಸುತ್ತದೆ. ಗುಂಡಾಗಿರಿಯ ಸಂಸ್ಕೃತಿಯಿಂದ ಬಂದವರು. ಅವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ತಾಳ್ಮೆ ಇರಬೇಕಿತ್ತು.
ರಾಮನಗರ ಇಷ್ಟು ದಿನ ಶಾಂತವಾವಿತ್ತು. ಇವರ ಈ ರೀತಿಯ ನಡವಳಿಕೆ ಜನರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಅನ್ನೋದು ಅರ್ಥ ಮಾಡಿಕೊಳ್ಳಬೇಕು. ಇನ್ನು ಅಶ್ವಥ್ ನಾರಾಯಣ್ ಅವರ ಪದಬಳಕೆಯೂ ಸರಿಯಾದುದ್ದಲ್ಲ. ತುಂಬಾ ಹತ್ತಿರದಿಂದ ನೋಡಿದ್ದೇವೆ. ಅವರದ್ದು ದಬ್ಬಾಳಿಕೆಯ ರಾಜಕೀಯ ಎಂದು ಇಂದು ರಾಮನಗರದಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.