ಬೆಂಗಳೂರು: ದಿನೇ ದಿನೇ ಬೆಲೆ ಏರಿಕೆಯಾಗುತ್ತಿರುವುದನ್ನು ಮಾಜಿ ಸಿಎಂ ಕುಮಾರಸ್ವಾಮಿ ಖಂಡಿಸಿದ್ದಾರೆ. ಇಂದು ಸುದ್ದಿಗೋಷ್ಟಿ ನಡೆಸಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಕೆಂಡಕಾರಿದ್ದಾರೆ. ಕಾಂಗ್ರೆಸ್ ನವರೇನು ಕಿತ್ತು ಗುಡ್ಡೆ ಹಾಕಿದ್ರಾ. ಇವರೊಬ್ಬರೇನಾ ಹೋರಾಟ ಮಾಡೋದು. ಜನಪ್ರತಿನಿಧಿಯಾಗಿ ಪಾಪದ ಕೊಡ ತುಂಬಿರುವ ಪಕ್ಷದ ವಿರುದ್ಧ ಹೋರಾಟ ಮಾಡ್ತೇನೆ.
ಬಿಜೆಪಿಯನ್ನ ಒಲೈಸಿಕೊಳ್ಳೋದಕ್ಕೆ ಇಷ್ಟು ದಿನ ಸುಮ್ಮನೆ ಇದ್ದುದ್ದಲ್ಲ. ಕೋರೊನಾ ಸಮಯದಲ್ಲಿ ಎಷ್ಟು ಸಮಸ್ಯೆ ಎದುರಿಸಿದ್ದಾರೆ. ಅವರ ಸಮಸ್ಯೆ ಬಗೆಹರಿಯಲಿ ಎಂದು ಸುಮ್ಮನೆ ಇದ್ದೆ. ಈ ಹಿಂದೆ ಶೂದ್ರರು ಓದಬಾರದು ಓದಿದರೆ ಸಮಾಜ ತಲೆ ಕೆಳಗಾಗುತ್ತೆ ಅನ್ನೋ ಥರ ಇತ್ತು. ಹಳ್ಳಿಗಳಲ್ಲಿ ನಾವೂ ನೋಡಿದ್ದೇವೆ. ಈ ಜಾತಿ ವ್ಯವಸ್ಥೆ ಬಂದಿದ್ದು, ಮನುಷ್ಯನ ಜೀವನ ಯಾವ ಹಂತದಲ್ಲಿ ಫಾರ್ಮ್ ಆಯ್ತು ಅನ್ನೋದನ್ನ ನೋಡಿದ್ದೇವೆ. ವೃತ್ತಿಯ ಮೇಲೆ ಜಾತಿಯನ್ನ ಗುರುತಿಸಲು ಶುರು ಮಾಡಿದರು. ನಮ್ಮನ್ನ ಗುಲಾಮರಾಗಿ ಇಡಬೇಕು ಎಂದು ಹೊರಟರಲ್ಲ ಆ ಜನಾಂಗದವರೇ ಹಿಂದೂ ಧರ್ಮ ಅಂತ ಹೇಳಿಕೊಂಡು ಬಂದರು. ಬಿಜೆಪಿಗರುಗಿಂತ ಒಂದೆಜ್ಜೆ ಮುಂದೆ ಹೋಗಿ ನಮ್ಮ ದೇಶದ ಸಂಸ್ಕೃತಿ ಕಾಪಾಡಿಕೊಂಡು ಬಂದಿದ್ದೇವೆ.
ವಿಶ್ವ ಹಿಂದೂ ಪರಿಷತ್ ನವರಿಗೆ ಹೇಳಿ ಪೆಟ್ರೋಲ್ ಡಿಸೇಲ್, ಸಿಮೆಂಟ್, ಸಿಲಿಂಡರ್ ಇದೆಲ್ಲಾ ಬೆಲೆ ಎಲ್ಲೋಗಿದೆ. ಸಂಘಟನೆಯವರೇ ಬನ್ನಿ ಕೇಸರಿ ಶಾಲು ಹಾಕೊಂಡು ಬನ್ನಿ ನಾನು ನಿಮ್ಮ ಜೊತೆ ಬರ್ತೀನಿ. ಬೆಲೆ ಏರಿಕೆ ಬಗ್ಗೆ ಕೇಳಿ ನಿಮ್ಮ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಯಾವ ಮುಖ ಇಟ್ಟುಕೊಂಡು ಜನರ ಮುಂದೆ ನಿಮ್ಮ ಬೆನ್ನು ತಟ್ಟಿಕೊಳ್ಳುತ್ತಿದ್ದೀರಿ. ಬಡವರನ್ನ ಇವತ್ತು ನಿರ್ಗತಿಕರನ್ನಾಗಿ ಮಡಲು ಹೊರಟಿದ್ದೀರಿ.
ಕಾಂಗ್ರೆಸ್ ನಾಯಕರು ಈಗ ತಮಟೆ ಹೊಡೆದುಕೊಂಡು ಹೊರಟಿದ್ದೀರ. ಸಿಲಿಂಡರ್ ಗೆ ಹೂವ ಹಾಕಿ ಮೆರವಣಿಗೆ ಮಾಡಿದ್ದೀರಿ. ಈ ಪರಿಸ್ಥಿತಿಗೆ ಕಾರಣ ಯಾರು. 70-100 ವರ್ಷದ ಪಾರ್ಟಿ ನಿಮ್ಮದು ಬಳುವಳಿ ಇದೆ ಇದರಲ್ಲಿ. ಎರಡು ರಾಷ್ಟ್ರೀಯ ಪಕ್ಷಗಳು 150 ರೋಡ್ ಮ್ಯಾಪ್ ಇಟ್ಟುಕೊಂಡು ಹೊರಟಿದ್ದಾರೆ. ಬಿಜೆಪಿಯವರು ಮನೆ ಮನೆಗೆ ಬೆಂಕಿ ಹಚ್ಚೋದನ್ನ ಇಡಿದುಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಡ್ತೀವಿ ಅಂತ ಹೊರಟಿದ್ದೀರಿ. ಸಲ್ಲ ರೀ ಹಿಜಾಬ್, ಹಲಾಲ್ ಬಗ್ಗೆ ಮಾತಾಡಿದ್ರೆ ವೋಟ್ ಬ್ಯಾಂಕ್ ಕಳೆದುಕೊಳ್ಳುತ್ತೇವೆ ಅಂತ ಮೂಲೆಯಲ್ಲಿ ಸೇರಿಕೊಂಡಿರಿ. ಇದಕ್ಕೆ ಮುಸ್ಲಿಂ ರು ನಿಮಗೆ ವೋಟ್ ಹಾಕಬೇಕಾ..? ಎಂದು ಪ್ರಶ್ನಿಸಿದ್ದಾರೆ.
ಇವತ್ತು ಹಿಂದೂ ಮುಸ್ಲಿಂ ಸೌಹಾರ್ದತೆ ಇಲ್ಲ ಅಂದ್ರೆ ಗುಜರಿ ಅಂಗಡಿಯಲ್ಲಿ ಕೆಲಸ ಮಾಡಲು ಹಿಂದೂ ಪರಿಷತ್ ನವರು ಬರುತ್ತಾರಾ..? ಇಲ್ಲ ಬೆಂಕಿ ಹಚ್ಚೋಕೆ ಬರುತ್ತಾರೆ. ನಿಜವಾಗಿಯೂ ನೀವೂ ದೇಶದ ಬಗ್ಗೆ ಗೌರವ ಇದ್ದರೆ ಬೆಲೆ ಏರಿಕೆ ಬಗ್ಗೆ ಬಂದು ಮಾತಾಡಿ ಎಂದು ಸವಾಲು ಹಾಕಿದ್ದಾರೆ.