Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಂಗಳೂರು ಅವರಿಂದಲೇ ಬೆಳಕು ಕಾಣ್ತಾ ಇದೆ ಎಂಬಂತಿತ್ತು ಅವರ ಭಾಷಣ : ಮೋದಿ ಬಗ್ಗೆ ಹೆಚ್ಡಿಕೆ ರಿಯಾಕ್ಷನ್

Facebook
Twitter
Telegram
WhatsApp

 

ಜುಲೈ 1 ರಿಂದ ಬೆಂಗಳೂರಿನಲ್ಲಿ ಪಕ್ಷ ಸಂಘಟನೆಯಿಂದ ಜನತಾ ಮಿತ್ರ ಪ್ರಾರಂಭವಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ ವಾರ ಸಭೆ ಮಾಡಿದ್ದೆ. ಇವತ್ತಿನಿಂದ ವಾರ್ಡ್ ವೈಸ್ ಮಾಡ್ತಾ ಇದ್ದೀನಿ. ಆಯಾಯ ಕ್ಷೇತ್ರಸ ಅಜೆಂಡಾ ಅದನ್ನು ಮನೆ ಮನೆಗೆ ತಲುಪಿಸೋದು.

ರಾಜ್ಯದಲ್ಲಿ ಸರ್ಕಾರದ ಆಡಳಿತ ಹೇಗಿದೆ..? 2013 ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಬಂತು. ನಂತರ ಕಾಂಗ್ರೆಸ್ ನವರೇ ಮಹಾನಗರ ಪಾಲಿಕೆಯಲ್ಲೂ ಇತ್ತು. ನಂತರ ಮೈತ್ರಿ ಸರ್ಕಾರ ಬಂತು. ಆ ಸಮಯದಿಂದ ಇಲ್ಲಿಯವರೆಗೆ ನಗರದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಜನರ ಮುಂದೆ ಇಡಬೇಕಿದೆ. ಬೆಂಗಳೂರು ನಗರದಲ್ಲಿ ಅಕ್ರಮ ಲೂಟಿ ನಿಲ್ಲಿಸಲು ಜನತಾ ದಳಕ್ಕೆ ಅವಕಾಶ ಕೊಡಿ ಅಂತ ಕೇಳ್ತೀವಿ. ಇವತ್ತಿನಿಂದ 3 ಕ್ಷೇತ್ರದ ಸಭೆ ನಡೆಯಲಿದೆ

ಎರಡು ದಿನ ಪ್ರಧಾನ ಮಂತ್ರಿ ಬಂದಿದ್ದರು. ಪತ್ರಿಕೆಲಿ ನೋಡಿದೆ ಇವತ್ತು. ಪ್ರೊಗ್ರೆಸ್ ರಿಪೋರ್ಟ್ ಬಂದಿದೆ. 33 ಸಾವಿರದ ಬರಪೂರ ಕೊಡುಗೆ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೇಳ್ತೀನಿ ಈ ಬಗ್ಗೆ. ಬೆಂಗಳೂರು ಅವರಿಂದಲೇ ಬೆಳಕು ಕಾಣ್ತಾ ಇದೆ ಅನ್ನೋ ಹಾಗಿತ್ತು ಅವರ ಭಾಷಣ.

ಸಬರ್ಬನ್ ಬಗ್ಗೆ ಮಾತಾಡ್ತಾರೆ. ಎರಡು ವರ್ಷ ಯಾಕೆ ನೆನಗುದಿಗೆ ಬಿದ್ದಿತ್ತು. ನಾನು 14 ತಿಂಗಳು ಸಿಎಂ ಆದಾಗ ದೇವೇಗೌಡರಿಗೆ ಮನವಿ ಮಾಡಿ ರೈಲ್ವೇ ಸಚಿವರನ್ನು ಭೇಟಿ ಮಾಡಿದ್ದೆ. ಈ ಯೋಜನೆ ಸ್ಪೀಡ್ ಮಾಡಲು ಮನವಿ ಮಾಡಿದ್ದೆ. ಕೃಷ್ಣಾ ಕಚೇರಿಯಲ್ಲಿ ಗೋಯಲ್ ಅವರನ್ನು ಇನ್ವೈಟ್ ಮಾಡಿ ಚರ್ಚೆ ಮಾಡ್ತೀನಿ. 2019 ರಲ್ಲಿ ಈ ಬಗ್ಗೆ ಖುದ್ದು ನಿಮ್ಮ ಮುಂದೆ ಹೇಳಿದ್ದೇ. ಪಾರ್ಲಿಮೆಂಟ್ ಚುನಾವಣೆಗೂ ಮುನ್ನ ಇದರ ಶಂಕು ಸ್ಥಾಪನೆ ಮಾಡ್ತೀನಿ ಅಂದಿದ್ದೆ.

ಮೂರು ವರ್ಷ ಯಾಕೆ ಪೆಂಡಿಂಗ್ ಇಟ್ರಿ ಹಾಗಾದ್ರೆ. ರಾಜ್ಯ ಸರ್ಕಾರದ ಒಪ್ಪಿಗೆ ತೆಗೆದುಕೊಂಡಿದ್ದೆ. ಈಗ ನೀವು ಚಾಲನೆ ಕೊಟ್ಟಿದ್ದು ಚುನಾವಣೆಗಾಗಿ ಅಷ್ಟೆ. 40 ವರ್ಷ ಆಗದೇ ಇರೋದು 40 ತಿಂಗಳಲ್ಲಿ ಮುಗುಸ್ತೀವಿ ಅಂತಾರೆ. ಆರು ವರ್ಷದ ಕಾರ್ಯಕ್ರಮ ಇದು. ನಾನು ಸಿಎಂ ಆದಾಗ ಎಲಿವೇಟೆಡ್ ಕಾರಿಡಾರ್ ಹೀಗೆ ಅನೇಕ ಯೋಜನೆಗೆ ಚಾಲನೆ ನೀಡಲಾಗಿದೆ. ಇವತ್ತು ಪ್ರಚಾರ ಮಾಡಿಕೊಂಡಿದ್ದಾರೆ.

ರಾಜ್ಯ ಪ್ರವಾಹದಿಂದ ಕೂಡಿದ್ದಾಗ ಬರಲಿಲ್ಲ ಈಗ ಬಂದಿದ್ದಾರೆ. ಬಿಜೆಪಿ ಅವರಿಗೆ ಮುಖ ಇಲ್ಲ ಹಾಗಾಗಿ ಮೋದಿಯವರನ್ನು ಇಟ್ಟುಕೊಂಡ ಹೋಗ್ತಾ ಇದ್ದಾರೆ. ಬಜೆಟ್ ನಲ್ಲಿ ಹಣ ಇಡ್ತೀವಿ ಅಂದು ಸಬರ್ಬನ್ ಗೆ ಇಟ್ಟಿದ್ದು ಒಂದು ಕೋಟಿ. ಇದು ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ತೆರಿಗೆ ಹಣವನ್ನು ಪಡೆದು ಕೇಂದ್ರ ನಮಗೆ ನ್ಯಾಯ ಕೊಟ್ಟಿಲ್ಲ.

ಅಂಬೇಡ್ಕರ್ ಕಾರ್ಯಕ್ರಮ ನಮ್ಮ ಕಾಲದಲ್ಲಿ ಪ್ರಾರಂಭವಾದದ್ದು ಅವರು ಚಾಲನೆ ಮಾಡಿದ್ದಾರೆ. ನರೇಂದ್ರ ಮೋದಿಯವರ ಚಾಳಿ ಇದು. ಬೇರೆಯವರ ಕಾರ್ಯಕ್ರಮಗಳಿಗೆ ಇವರು ಚಾಲನೆ ನೀಡೋದು ಇವರು ಎಂದು ಕಿಡಿಕಾರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!