ಬೆಂಗಳೂರು: ಮಸೀದಿಗಳಲ್ಲಿ ಆಜಾನ್ ಕೂಗುವ ಧ್ವನಿವರ್ಧಕ ನಿಷೇಧಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಈ ಸಂಬಂಧ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಹಿಂದೂಪರ ಸಂಘಟನೆಯವರಿಗೂ ಸವಾಲು ಹಾಕಿದ್ದಾರೆ.
ಪದೇ ಪದೇ ಸರ್ಕಾರದ ಅಂಗಪಕ್ಷಗಳು ಈ ರೀತಿಯ ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ನಿಟ್ಟಿನಲ್ಲಿ ಹೊರಟಿರುವುದು ನಿಜಕ್ಕೂ ನಮ್ಮ ಸಂಸ್ಕೃತಿಗೆ ಅಗೌರವ ತೋರಿಸುತ್ತಿದೆ ಅನ್ನೋದು ನನ್ನ ಅಭಿಪ್ರಾಯ. ಸರ್ಕಾರಕ್ಕೆ ಬಹಳಷ್ಟು ಬಾರಿ ಎಚ್ಚರಿಕೆಯನ್ನು ಕೊಟ್ಟಿದ್ದೇನೆ. ಆದರೂ ಈ ವಿಷಯಗಳನ್ನ ಇಷ್ಟೊಂದು ಲಘುವಾಗಿ ಪರಿಗಣಿಸಿದ್ದಾರೆ. ದಿನಕ್ಕೆ ಒಂದೊಂದು ವಿಚಾರಗಳನ್ನು ರೈಸ್ ಮಾಡುತ್ತಿದ್ದಾರೆ.
ನಾನು ಅವರೆಲ್ಲರಿಗೂ ಹೇಳ್ತೀನಿ ನಿಜಕ್ಕೂ ನೀವೂ ರಾಮನ ಭಕ್ತರೇ ಆಗಿದ್ರೆ ಹಿಂದೂ ಸಂಸ್ಕೃತಿಯ ಸಿದ್ಧಾಂತ, ಆಚರಣೆಗಳನ್ನು ದಿನನಿತ್ಯದಲ್ಲಿ ಆಚರಣೆ ಮಾಡಲು ಒತ್ತುಕೊಟ್ಟರೆ ಆಗ ನಿಜವಾದ ಹಿಂದೂ ಧರ್ಮ ಕಾಪಾಡಿದಂತೆ. ಆಗ ನಿಜವಾದ ರಾಮನ ಭಕ್ತರಾಗುತ್ತಿರಿ. ನಾನೇ ಚಿಕ್ಕವಯಸ್ಸಿನಲ್ಲಿ ಸ್ಮರಿಸಿಕೊಂಡಿದ್ದೇನೆ. ನಾನು ಹೊಳೆನರಸೀಪುರದಲ್ಲಿ ಕುಟುಂಬವಿದ್ದಾಗ ನಾವಿನ್ನೂ ಚಿಕ್ಕ ಮಕ್ಕಳು ಅಲ್ಲಿ ಸಂಜೆ ವೇಳೆಗೆ ದೀಪದ ಸ್ತಂಭವನ್ಬ ಕೈನಲ್ಲಿಟ್ಟುಕೊಂಡು ಪ್ರಮುಖ ಬೀದಿಯಲ್ಲಿ ಭಜನೆ ಮಾಡುತ್ತಾ ಮೆರವಣಿಗೆ ನಾಡುತ್ತಾ ಇದ್ದದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ರಾಮನ ನಾಮಗಳನ್ನು ಪಠಿಸುತ್ತಾ ಸರ್ಕಲ್ ಗಳಲ್ಲಿ ನಿಂತು ಭೂಮಿ ಸ್ಪರ್ಶ ಮಾಡುತ್ತಿದ್ದೆವು. ಆ ದೃಶ್ಯಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ ಎಂದಿದ್ದಾರೆ.