ಮೈಸೂರು: ಇವರು ಮಾತ್ರ ರಾಷ್ಟ್ರ ಪ್ರೇಮಿಗಳು. ಏನು ರಾಷ್ಟ್ರ ಪ್ರೇಮಿ ಕೆಲಸ ಮಾಡಿದ್ದೀರಿ. ಪೆಟ್ರೋಲ್ ರೇಟ್ 111 ಸರಿಯಾಗಿ ಮೂರು ನಾಮ ಹಾಕಿದ್ದೀರಿ ಈ ನಾಡಿನ ಜನತೆಗೆ. ಡಿಸೇಲ್ ರೇಟ್, ಗೊಬ್ಬರದ ರೇಟ್, ಗ್ಯಾಸ್ ರೇಟ್ ಏನೂ ಮಾಡಿದ್ದೀರಿ. ನಾನೂ ಅದಕ್ಕೆ ಹೇಳಿದ್ದೀನಿ ಅದ್ಯಾರೋ ಭಜರಂಗದಳ, ಹಿಂದೂಪರಿಷತ್ ಅವರಿಗೆ ಬಂದ್ರಪ್ಪ ಬೀದಿಗೆ ಹೋರಾಟ ಮಾಡೋಕೆ ನಾನು ನಿಮ್ಮ ಜೊತೆ ಕೈ ಜೋಡಿಸ್ತೀನಿ. ಇಂಥ ಕೆಲಸಕ್ಕೆ ಬನ್ನಿ, ಆದ್ರೆ ಮನೆಗೆ ಬೆಂಕಿಗೆ ಹಚ್ಚಲು ಬರಬೇಡಿ. ಬೆಂಕಿ ಹಚ್ಚ ಕೆಲಸಕ್ಕೆ ಕೇಸರಿ ಶಾಲು ಹಾಕಿಕೊಂಡು ಬರಬೇಡಿ ಎಂದು ಸಂಘಟನೆ ಬಗ್ಗೆ ಆಕ್ರೋಶಗೊಂಡಿದ್ದಾರೆ.
ಬೀದಿಯಲ್ಲಿ ಹೋಗುವವರೆಲ್ಲಾ ಕೇಸರಿ ಶಾಲು ಹಾಕಿಕೊಂಡು ಹೋಗುತ್ತಿದ್ದಾರೆ. ಜೈಶ್ರೀರಾಮ್ ಜೈಶ್ರೀರಾಮ್ ಅಂತಿದ್ದಾರೆ. ಆ ಶಾಲಿಗೆ ಎಷ್ಟು ಮಹತ್ವವಿದೆ ಗೊತ್ತಾ..? ನಾವೂ ಜೈಶ್ರೀರಾಮ್ ಅಂತಾನೆ ಹೇಳಿದ್ದೀವಿ. ಜೈಶ್ರೀರಾಮ್ ಹೆಸರನ್ನ ಹೇಳ್ತೀವಿ. ಆದ್ರೆ ನೀವೂ ಜೈಶ್ರೀರಾಮ್ ಹೆಸರೇಳಿಕೊಂಡು ರಾವಣನ ರಾಜ್ಯ ಮಾಡಬೇಡಿ. ರಾಮನ ರಾಜ್ಯ ಮಾಡಿ ಅದನ್ನ ನಾನು ಹೇಳ್ತೇನೆ.
ಮುಸ್ಲಿಂ ಬಾಂಧವರು ದಿನಕ್ಕೆ ಐದು ಬಾರಿ ಪೂಜೆ ಮಾಡುತ್ತಾ ಇದ್ದೀರಲ್ಲ ಇವರಿಗೆಲ್ಲಾ ದೇವರು ಒಳ್ಳೆಯದ್ದನ್ನು ಮಾಡಲಿ ಎಂದು ಬೇಡಿಕೊಳ್ಳಿ ಯಾವುದೇ ಕಾರಣಕ್ಕೂ ಅಶಾಂತಿಯ ವಾತಾವರಣಕ್ಕೆ ಅವಕಾಶ ಕೊಡಬೇಡಿ. ಮುಸಲ್ಮಾನ ಬಂಧುಗಳ ಯುವಕರಿಗೆ ಈ ವೇದಿಕೆ ಮೂಲಕ ಮನವಿ ಮಾಡುತ್ತೇನೆ. ಶಾಂತ ರೀತಿಯಿಂದ ವರ್ತಿಸಿ ಎಂದು ಹೇಳುತ್ತೇನೆ.
ಜಾತಿಗಳನ್ನು ಮಾಡಿದ್ದವರು ಯಾರು..? ಈ ಬಗ್ಗೆ ನಾವೂ ಯೋಚಿಸಿದ್ದೇವಾ..? ಈಗ ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಸಂಸ್ಕೃತ ಎಲ್ಲಿತ್ತು..? ನಾಡಿನ ಜನತೆಗೆ ಹೇಳೋದು ಒಂದೇ ನಾವೆಲ್ಲಾ ಒಂದೇ. ಬಸವಣ್ಣನ ವಚನವಿದೆ ಅವನ್ಯಾರವ ಅವನ್ಯಾರ ಅವ ನಮ್ಮವ ಅವ ನಮ್ಮವ ಅನ್ನೋ ಥರ ಇರಬೇಕು. ಸರ್ಕಾರದ ಕೆಲಸ ಪ್ರತಿ ಕುಟುಂಬ ನೆಮ್ಮದಿಯಾಗಿ ಬದುಕುವಂತ ವಾತಾವಾರಣ ನಿರ್ಮಾಣ ಮಾಡಬೇಕಿರುವುದು ಸರ್ಕಾರದ ಕೆಲಸ. ಕರ್ನಾಟಕವನ್ನ ಯಾವುದೇ ಕಾರಣಕ್ಕೂ ಉತ್ತರ ಪ್ರದೇಶ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.