ರಾಮನಗರ: ಸದ್ಯದ ರಾಜ್ಯದ ಸ್ಥಿತಿ ಕಂಡು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ. ಜಿಲ್ಲೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಆಕ್ಸಿಜನ್ ಇಲ್ಲದೆ ಜನ ಸತ್ತಿದ್ದು ನೋಡಲಿಲ್ವಾ. ಆಕ್ಸಿಜನ್ ಎಲ್ಲಿದೆ, ಆಸ್ಪತ್ರೆಗಳ ಸೆಇಯಾದ ವ್ಯವಸ್ಥೆ ಎಲ್ಲಿದೆ. ಅವತ್ತು ಎಲ್ಲಿ ಹೋಗಿದ್ರು ವಿಶ್ವ ಹಿಂದೂ ಪರಿಷತ್ ಸದಸ್ಯರು. ಬೀದಿಯಲ್ಲಿ ಜನ ಸಾಯುತ್ತಿದ್ದಾಗ ಇದೇ ಭಜರಂಗದಳದವರು ಎಲ್ಲೋಗಿದ್ರು.
ಇವತ್ತು ರೇಷ್ಮೇ ಗೂಡಿನ ಬೆಲೆ ಕುಸಿತ ಆಗ್ತಾ ಇದೆ. ಈ ಸರ್ಕಾರಕ್ಕೇನಾದ್ರೂ ಮಾನ ಮರ್ಯಾದೆ ಇದ್ರೆ, ಬೊಮ್ಮಾಯಿ ಅವರಿಗೆ ನಿಮಗೇನಾದರೂ ಗಂಡಸ್ತನ ಇದ್ರೆ, ಈ ಪದ ನಾನು ಉಪಯೋಗ ಮಾಡಬಾರದು ಆದ್ರೆ ನೋವು ತಡೆಯಲಾರದೆ ಹೇಳ್ತಾ ಇರೋದು. ಇಷ್ಟು ದಿವಸದಿಂದ ಈ ರೀತಿಯೆಲ್ಲ ನಡೀತಾ ಇದೆ. ನಮಗೇನು ಗೊತ್ತಿಲ್ಲದೆ ಮೌನವಾಗಿದ್ದರೆ. ಅದಕ್ಕೇನಂತ ಅರ್ಥ. ಸಮಾಜಘಾತಯಕ ಶಕ್ತಿಗಳು ಸಮಾಜ ಹೊಡೆಯುವ ಕೆಲಸ ಮಾಡ್ತಿವೆ. ಯಾವ ಸಂವಿಧಾನ ಗೌರವಿಸ್ತಾ ಇದ್ದೀರಾ. ಯಾತಕ್ಕೆ ಅಂವೇಡ್ಕರ್ ಜಯಂತಿ ಮಾಡ್ತೀರಾ. ಅವರಿಗೆ ಯಾಕೆ ಅಪಪ್ರಚಾರ ಮಾಡ್ತೀರಿ.
ನನಗೆ ವೋಟ್ ಮುಖ್ಯ ಅಲ್ಲ. ನಾಡು ಶಾಂತಿಯಿಂದ ಬದುಕಬೇಕು. ಈ ನಾಡಿನ ಜನರ ಬದುಕು ಬೇಕು. ನಿಮ್ಮ ಕೇಸರಿ ಬಟ್ಟೆ ಹಾಕಿಕೊಂಡು, ಹಳ್ಳಿಹಳ್ಳಿಯಲ್ಲಿ ವಿಷಬೀಜ ಬಿತ್ತಿ ನಮ್ಮ ಜನರ ಬದುಕನ್ನ ಹಾಳುಮಾಡೋದಕ್ಕೆ ನಾನಂತು ಮೌನವಾಗಿರಲು ಸಾಧ್ಯವಿಲ್ಲ.
ಕಾಂಗ್ರೆಸ್ ನವರಿಗೆ ಮಾತನಾಡಲು ತಾಕತ್ತಿಲ್ಲ. ಪಾಪ ಧೈರ್ಯ ಕಳೆದುಕೊಂಡಿದ್ದಾರೆ ಅವರು. ನಾನು ಇದರಲ್ಲಿ ಮತ ಬ್ಯಾಂಕ್ ಗಿಂತ ಹೆಚ್ಚಾಗಿ ನನ್ನ ಜನರ ಬದುಕು ಮುಖ್ಯ. ಕುವೆಂಪು ಅವರ ಸಂದೇಶ ಸರ್ವಜನಾಂಗದ ಶಾಂತಿಯ ತೋಟ. ಆದ್ರೆ ಇದಕ್ಕೆ ಬೆಂಕಿ ಹಚ್ಚೋದಕ್ಕೆ ಬಂದಿದ್ದೀರಿ. ಇದೆಲ್ಲವನ್ನು ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ ಎಂದು ಕಿಡಿಕಾರಿದ್ದಾರೆ.